ಕೊರೊನಾ ಲಸಿಕೆ ತಯಾರಿಕಾ ಕಂಪನಿಗಳಿಗೆ ಪ್ರಧಾನಿ ಭೇಟಿ,

ಅಹಮದಾಬಾದ್:

     ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಕೊರೊನಾ ಲಸಿಕಾ ತಯಾರಿಕಾ ಕಂಪನಿಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ.

      ಅಹಮದಾಬಾದ್ ನ ಝೈಡಸ್ ಬಯೋಪಾರ್ಕ್ ಸಂಸ್ಥೆಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಕೊರೊನಾ ಸೋಂಕಿಗೆ ಸಂಸ್ಥೆ ತಯಾರಿಸುತ್ತಿರುವ ZyCoV-D ಲಸಿಕೆ ತಯಾರಿಯ ಪ್ರಗತಿ ಪರಿಶೀಲಿಸಿದರು. ಇದೇ ವೇಳೆ ಲಸಿಕೆ ಸಂಶೋಧಿಸುತ್ತಿರುವ ವಿಜ್ಞಾನಿಗಳ ಜೊತೆಯೂ ಚರ್ಚೆ ನಡೆಸಿದರು.

     ತನ್ನ ಕೊರೊನಾ ಲಸಿಕೆ ZyCoV-D ಮೊದಲ ಹಂತದ ಪರೀಕ್ಷೆ ಮುಗಿದಿದ್ದು, ಆಗಸ್ಟ್​ನಿಂದ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಶುರು ಮಾಡಿರುವುದಾಗಿ ಈ ಹಿಂದೆ ಸಂಸ್ಥೆ ತಿಳಿಸಿತ್ತು. ಎರಡನೆಯ ಹಂತ ಮುಗಿದ ಬಳಿಕ ಮೂರನೇ ಮತ್ತು ಕೊನೆಯ ಹಂತದ ಪ್ರಯೋಗ ನಡೆಯಲಿದ್ದು, ಆ ವೇಳೆಗೆ ಲಸಿಕೆಯ ಗುಣಮಟ್ಟದ ಮತ್ತು ದಕ್ಷತೆಯ ಖಚಿತ ವಿವರ ಸಿಗಲಿದೆ.

     ಇದೀಗ ಮೋದಿ ಝೈಡಸ್​ ಬಯೋಟೆಕ್​ ಪಾರ್ಕ್​​ಗೆ ಆಗಮಿಸಿದ್ದು, ಲಸಿಕೆ ಅಭಿವೃದ್ಧಿಯ ಪ್ರಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

     ಇಲ್ಲಿಂದ ಮಧ್ಯಾಹ್ನ 1:30ಕ್ಕೆ ಪುಣೆಯ ಸೀರಂ ಇನ್ಸ್​ಟಿಟ್ಯೂಟ್​ಗೆ ತೆರಳಿ ಅಲ್ಲಿ ಕೋವಿಶೀಲ್ಡ್​ ವ್ಯಾಕ್ಸಿನ್ ಬಗ್ಗೆ ವಿಜ್ಞಾನಿಗಳು ಹಾಗೂ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಲಿದ್ದಾರೆ. ಪುಣೆಯಿಂದ ತೆಲಂಗಾಣದ ಭಾರತ್ ಬಯೋಟೆಕ್​ಗೆ ತೆರಳಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿರುವ ಕೋವ್ಯಾಕ್ಸಿನ್ ಕುರಿತು ತಜ್ಞರಿಂದ ವಿವರಣೆ ಪಡೆಯಲಿದ್ದಾರೆ.

     ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಸೋಂಕಿಗೆ ವ್ಯಾಕ್ಸಿನ್ ಸಂಶೋಧನೆಗಳು ಭರದಿಂದ ಸಾಗಿವೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap