ರಂಜಾನ್ : ಉರ್ದುವಿನಲ್ಲಿ ಪ್ರಧಾನಿಯ ಶುಭಾಶಯ!!

ದೆಹಲಿ:

       ದೇಶಾದ್ಯಂತ ಇಂದು ಈದುಲ್ ಫಿತ್ರ್(ರಂಜಾನ್) ಹಬ್ಬ ಆಚರಿಸುತ್ತಿರುವ ಸರ್ವರಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

      ತಮ್ಮ ಟ್ವಿಟರ್‌ನಲ್ಲಿ ಇಂಗ್ಲೀಷ್ ಹಾಗೂ ಉರ್ದುವಿನಲ್ಲಿ ಈದುಲ್ ಫಿತ್ರ್‌ಗೆ ಶುಭಾಶಯಗಳು ಎಂದು ಸಂದೇಶವನ್ನು ಬರೆದಿರುವ ಮೋದಿ, ಸಂದೇಶದ ಕೆಳಗೆ ತಮ್ಮ ಸಹಿ ಹಾಕಿದ್ದಾರೆ.

      ಈ ವಿಶೇಷ ದಿನ ಸಮಾಜದಲ್ಲಿ ಸೌಹಾರ್ದತೆ, ಸಹಾನುಭೂತಿ ಹಾಗೂ ಶಾಂತಿಯನ್ನು ನಿರ್ಮಿಸಲಿ. ಎಲ್ಲರೂ ಸುಖ-ಸಂತೋಷವನ್ನು ಪಡೆಯಲಿ ಎಂದು ಪ್ರಧಾನಿ ಶುಭ ಹಾರೈಸಿದ್ದಾರೆ.

      ಇಸ್ಲಾಂ ಕ್ಯಾಲೆಂಡರ್ ಅನ್ವಯ 9ನೇ ತಿಂಗಳು ರಂಜಾನ್ ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ಮುಸ್ಲಿಮರು ತಿಂಗಳಕಾಲ ಉಪವಾಸ ವ್ರತ ಆಚರಿಸುತ್ತಾರೆ.ರಂಜಾನ್‌ ದಿನದಂದು ಉಪವಾಸ ವೃತ ಕೊನೆಗೊಳಿಸಿ ಸಂಭ್ರದಿಂದ ಹಬ್ಬ ಆಚರಿಸುತ್ತಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

 

Recent Articles

spot_img

Related Stories

Share via
Copy link
Powered by Social Snap