ಮೇ.3ರ ತನಕ ಲಾಕ್ ಡೌನ್ ಫಿಕ್ಸ್ : ಮೋದಿಯಿಂದ ಜನತೆಗೆ ‘ಸಪ್ತ ಸೂತ್ರ’ಗಳ ರವಾನೆ!!

ನವದೆಹಲಿ :

      ದೇಶದಲ್ಲಿ ಮಾರಕ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮೇ.3ರವರೆಗೆ ಅಂದರೆ ಇನ್ನು 19 ದಿನಗಳವರೆಗೆ ಲಾಕ್ ಡೌನ್ ಮುಂದುವರೆಯಲಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

      ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ 21 ದಿನಗಳ ಲಾಕ್‌ ಡೌನ್ ಅವಧಿ ಇಂದಿಗೆ ಮುಕ್ತಾಯವಾಗಿದೆ. ಈ ನಡುವೆ ಇಂದು ಪ್ರಧಾನಿ ಮೋದಿಯವರು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

      ಮಹಾಮಾರಿ ಕೊರೋನ ವೈರಸ್ ಸೋಂಕು ಹರಡುವುದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಲಾಕ್ ಡೌನ್ ಮಾಡಿದ್ದೇವೆ. ಲಾಕ್ ಡೌನ್ ಲಾಭ ಭಾರತಕ್ಕೆ ಸಿಕ್ಕಿದೆ. ಈಗಾಗಲೇ ಜಾರಿಯಲ್ಲಿರುವ ಲಾಕ್ ಡೌನ್ ನ್ನು ಮೇ 3ರ ತನಕ ವಿಸ್ತರಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಕಟಿಸಿದರು. 

      ಇದರೊಂದಿಗೆ ದೇಶದ ಜನತೆಗೆ ಸಪ್ತ ಸೂತ್ರಗಳನ್ನು ಪ್ರಧಾನಿ ನೀಡಿದ್ದಾರೆ. ಈ ಸಪ್ತ ಸೂತ್ರಗಳನ್ನು ಪಾಲಿಸುವ ಅಗತ್ಯದ ಬಗ್ಗೆಯೂ ಪ್ರಧಾನಿ ತಿಳಿಸಿದ್ದಾರೆ.

  1. ನಿಮ್ಮ ಮನೆಯ ಹಿರಿಯ ನಾಗರಿಕರನ್ನು, ಅದರಲ್ಲೂ ವಿಶೇಷವಾಗಿ ಸಮಸ್ಯೆಗಳಿರುವವರನ್ನು ಸರಿಯಾಗಿ ನೋಡಿಕೊಳ್ಳಿ.
  2. ಲಾಕ್‌ಡೌನ್ ಮತ್ತು ಸಾಮಾಜಿಕ ದೂರವನ್ನು ಸರಿಯಾಗಿ ಅನುಸರಿಸಬೇಕು. ಮನೆಯಲ್ಲಿ ತಯಾರಿಸಿದ ಫೇಸ್ ಕವರ್ ಮತ್ತು ಮಾಸ್ಕ್ ಗಳನ್ನು ಬಳಸಬೇಕು.
  3.  ಆಯುಷ್ ಸಚಿವಾಲಯ ನೀಡಿದ ನಿರ್ದೇಶನಗಳನ್ನು ಅನುಸರಿಸಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ.
  4. ಕೊರೊನಾವೈರಸ್ ಹರಡುವಿಕೆಯನ್ನು ತಡೆಯಲು, ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
  5. ಸಾಧ್ಯವಾದಲ್ಲೆಲ್ಲಾ ಬಡ ಕುಟುಂಬಗಳಿಗೆ ಸಹಾಯ ಮಾಡಿ.
  6. ನಿಮ್ಮ ವ್ಯವಹಾರಗಳಲ್ಲಿ, ನಿಮ್ಮ ಸಹೋದ್ಯೋಗಿಗಳಿಗೆ ಸಹಾಯ ಮಾಡಿ, ನೌಕರರನ್ನು ಕೆಲಸದಿಂದ ತೆಗದುಹಾಕಬೇಡಿ.
  7.  ಕೊರೋನ ವೈರಸ್ ‘ಸೈನಿಕರು’ – ವೈದ್ಯರು, ದಾದಿಯರು, ನೈರ್ಮಲ್ಯ ಕಾರ್ಮಿಕರನ್ನು ಗೌರವಿಸಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link
Powered by Social Snap