ರಾಜಸ್ಥಾನ:

ಭಾರತ ದೇಶವನ್ನು ಅಳಿಸಲಾಗದು, ತಡೆಯಲಾಗದು, ಬಗ್ಗಿಸಲೂ ಆಗದು ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಕ್ ಮೇಲೆ ವಾಯು ದಾಳಿ ನಡೆದ ಬಳಿಕ ಅವರು ರಾಜಸ್ಥಾನದಲ್ಲಿ ಮಾತನಾಡಿ, ಉಗ್ರರನ್ನು ದಮನಗೈದ ಸೇನೆಯ ಕಾರ್ಯವನ್ನು ಶ್ಲಾಘಿಸಿದರು. ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ನನ್ನ ಮನಸ್ಸು ಹೇಳಿತ್ತಿದೆ, ನನ್ನ ದೇಶವನ್ನು ಅಳಿಸಲಾಗದು, ತಡೆಯಲಾಗದು, ಬಗ್ಗಿಸಲೂ ಆಗದು ಎಂದು ಆಗ್ರಹಿಸಿದ್ದಾರೆ.
ನಿಮ್ಮ ಜೋಶ್ ನನಗೆ ಅರ್ಥವಾಗುತ್ತದೆ. ನಮ್ಮ ಸೈನ್ಯ ನಮ್ಮ ಹೆಮ್ಮೆ. ದೇಶದ ಮೇಲೆ ನಡೆಯುವ ಯಾವುದೇ ದಾಳಿ ಯತ್ನವನ್ನು ಸಮರ್ಥವಾಗಿ ಎದುರಿಸಲು ನಾವು ಸಿದ್ದರಿದ್ದೇವೆ. ಇಂದು ನಮ್ಮ ದೇಶ ಸುರಕ್ಷಿತವಾಗಿದ್ದು, ಸುರಕ್ಷಿತರ ಕೈಯಲ್ಲಿದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ ಎಂದರು.
2014ರಲ್ಲಿ ನಾನು ಮಾತುಕೊಟ್ಟಂತೆ ನಡೆದುಕೊಂಡಿದ್ದೇನೆ. ದೇಶಕ್ಕಾಗಿ, ದೇಶದ ಜನತೆಗಾಗಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಇಂದು ಇನ್ನೊಮ್ಮೆ 2014ರ ನನ್ನ ಮಾತುಗಳನ್ನು ನಿಮ್ಮ ಮುಂದೆ ಹೇಳುತ್ತೇನೆ. ದೇಶಕ್ಕಿಂತ ದೊಡ್ಡದು ಏನಿಲ್ಲ. ಈ ಮಣ್ಣಿನಾಣೆಗೂ ದೇಶಕ್ಕೆ ಹಾನಿಯಾಗಲು ಬಿಡಲ್ಲ. ನಾನು ಯಾವತ್ತು ದೇಶ ತಲೆ ತಗ್ಗಿಸುವ ಕೆಲಸ ಮಾಡಲ್ಲ ಎಂದು ಈ ಭಾರತದ ಪ್ರಧಾನ ಸೇವಕನಾದ ನಾನು ಚುರು ಭೂಮಿಯಲ್ಲಿ ಭಾರತ ಮಾತೆಗೆ ವಾಗ್ದಾನ ಮಾಡುತ್ತೇನೆ ಎಂದು ಹೇಳಿದರು.
