ಪವರ್ ಗ್ರಿಡ್ ವೈಫಲ್ಯ ; ಮುಂಬೈನಲ್ಲಿ ಸಂಪೂರ್ಣ ವಿದ್ಯುತ್ ಕಡಿತ!!

ಮುಂಬೈ:

     ಭಾರತದ ವಾಣಿಜ್ಯ ನಗರಿ ಮುಂಬೈನ ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್)ದಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಪೂರ್ಣ ವಿದ್ಯುತ್ ಕಡಿತವಾಗಿದೆ.

      ಟಾಟಾ ಒಳಬರುವ ವಿದ್ಯುತ್ ಸರಬರಾಜು ವೈಫಲ್ಯದಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ. ಗ್ರಿಡ್ ವೈಫಲ್ಯದಿಂದಾಗಿ ಮುಂಬೈನ ದೊಡ್ಡ ಭಾಗಗಳು ಮತ್ತು ಥಾಣೆಯ ಕೆಲವು ಪ್ರದೇಶಗಳು ಬೆಳಿಗ್ಗೆ 10: 15 ರಿಂದ ವಿದ್ಯುತ್ ಕಡಿತವನ್ನು ಎದುರಿಸುತ್ತಿವೆ.ಗ್ರಿಡ್ ವೈಫಲ್ಯದಿಂದಾಗಿ ಮುಂಬೈ ಉಪನಗರ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ ಎಂಬ ಅಂಶವೂ ಬೆಳಕಿಗೆ ಬಂದಿದೆ.

    ಬೃಹನ್ ಮುಂಬೈ ವಿದ್ಯುತ್ ಸರಬರಾಜು ಹಾಗೂ ಪೂರೈಕೆ ಸಂಸ್ಥೆ(BEST) ಹಾಗೂ ಟಾಟಾ ಸಂಸ್ಥೆಯಿಂದ ಮುಂಬೈನ ಮೆಟ್ರೋಪಾಲಿಟನ್ ಪ್ರದೇಶ(ಎಂಎಂಆರ್)ಕ್ಕೆ ವಿದ್ಯುತ್ ಪೂರೈಕೆಯಾಗುತ್ತದೆ.  ಟಾಟಾ ಒಳಬರುವ ವಿದ್ಯುತ್ ಸರಬರಾಜು ವೈಫಲ್ಯದಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ. ವಿದ್ಯುತ್ ಇನ್ಪುಟ್ ಸಿಗದ ಕಾರಣ ಪೂರೆಕೆ ಮಾಡಲು ಆಗುತ್ತಿಲ್ಲ, ಅನಾನುಕೂಲತೆಗಳಿಗೆ ವಿಷಾದವಿದೆ ಎಂದು ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ವಿದ್ಯುತ್ ಟ್ವೀಟ್‌ನಲ್ಲಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link