ನವದೆಹಲಿ:
ಎಜಿಆರ್ಗೆ ಸಂಬಂಧಿಸಿದಂತೆ ಟೆಲಿಕಾಂ ಕಂಪನಿಗಳು ಎತ್ತಿದ ಸಮಸ್ಯೆ ಕ್ಷುಲ್ಲಕ ಎಂದು ಹೇಳಿದ ಸುಪ್ರೀಂಕೋರ್ಟ್, ನೈಜ ಶುಲ್ಕಗಳು ಮಾತ್ರವಲ್ಲ, ಬಡ್ಡಿ ಮತ್ತು ಪಾವತಿ ವಿಳಂಬಕ್ಕೆ ದಂಡವನ್ನು ಪಾವತಿಸಬೇಕು ಎಂದು ಸೂಚನೆ ನೀಡಿದೆ
ಈ ಆದೇಶದಿಂದಾಗಿ ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ 92,642 ಕೋಟಿ ಹಣವನ್ನು ಕಟ್ಟಬೇಕಿದೆ. ಇದರಲ್ಲಿ ಅರ್ಧದಷ್ಟು ಹಣವನ್ನು ಏರ್ಟೆಲ್ ಮತ್ತು ವೋಡಾಫೋನ್ ಕಂಪನಿಗಳೇ ಪಾವತಿಸಬೇಕಿದೆ.
ಎಜಿಆರ್ ಬಳಕೆ ಮತ್ತು ಪರವಾನಗಿ ಶುಲ್ಕವನ್ನು ಟೆಲಿಕಾಂ ಕಂಪನಿಗಳಿಗೆ ದೂರಸಂಪರ್ಕ ಇಲಾಖೆ ವಿಧಿಸುತ್ತದೆ. ನ್ಯಾಯಾಲಯಕ್ಕೆ ಸಲ್ಲಿಸಿದ ಸಂಖ್ಯೆಗಳ ಪ್ರಕಾರ, ಭಾರತಿ ಏರ್ಟೆಲ್ 21,682 ಕೋಟಿ ಹಾಗೂ ವೋಡಾಫೋನ್ ಐಡಿಯಾ 19,823 ಕೋಟಿ ಹಾಗೂ ರಿಲಾಯನ್ಸ್ ಕಮ್ಯುನಿಕೇಷನ್ಸ್ 16,456 ಕೋಟಿ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ