ತ್ರಿವಳಿ ತಲಾಖ್ : ಪತಿಯರಿಗೆ 3 ವರ್ಷ ಸಜೆ ; ರಾಷ್ಟ್ರಪತಿ ಅಂಕಿತ!!!

ದೆಹಲಿ:

     ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಿರುವ ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಅಂಕಿತ ಹಾಕಿದ್ದಾರೆ.

     ವಿವಾಹಿತ ಮುಸ್ಲಿಂ ಮಹಿಳೆಯರಿಗೆ ವೈವಾಹಿಕ ಸಮಸ್ಯೆಗಳಿಗೆ ರಕ್ಷಣೆ ನೀಡುವ ಈ ವಿಧೇಯಕದಲ್ಲಿ ತಮ್ಮ ಪತ್ನಿಯರಿಗೆ ಸ್ಥಳದಲ್ಲೇ ಮೂರು ಬಾರಿ ತಲಾಖ್ ಎಂದು ಹೇಳಿ ವಿಚ್ಛೇದನ ನೀಡುವ ಪತಿಯರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಶೀಘ್ರದಲ್ಲಿಯೇ ಇದು ಕಾನೂನು ಆಗಿ ಜಾರಿಗೆ ಬರಲಿದೆ ಎಂದು ಸರಕಾರದ ಅಧಿಸೂಚನೆ ತಿಳಿಸಿದೆ.

      ಹಿಂದೂ ವ್ಯಕ್ತಿ ವಿಚ್ಚೇದನ ನೀಡಿದರೆ ಆತನಿಗೆ 1 ವರ್ಷ ಜೈಲು ಶಿಕ್ಷೆ ನಿಗದಿಪಡಿಸಲಾಗಿದೆ. ಆದರೆ ಮುಸ್ಲಿಂ ವ್ಯಕ್ತಿಗೆ 3 ವರ್ಷ ಶಿಕ್ಷೆ ವಿಧಿಸಲಾಗಿದೆ. ಅದೇ ರೀತಿ, ವ್ಯಕ್ತಿಯು ಜೈಲಿಗೆ ಹೋದ ಬಳಿಕ ಮಕ್ಕಳ ಲಾಲನೆ, ಪಾಲನೆ ಯಾರು ಮಾಡುತ್ತಾರೆ ಎಂಬುದನ್ನು ಮ್ಯಾಜಿಸ್ಟ್ರೇಟ್ ನಿರ್ಧರಿಸುತ್ತಾರೆ. ಆದರೆ ಉಸ್ತುವಾರಿಗಾಗಿ ಸರ್ಕಾರ ಯಾವುದೇ ನಿಬಂಧನೆಗಳನ್ನು ಮಾಡಿಲ್ಲ.

     ಲೋಕಸಭೆಯಲ್ಲಿ ಈ ಹಿಂದೆ ಅನುಮೋದನೆ ಪಡೆದಿದ್ದ ಈ ಮಸೂದೆಗೆ ಮಂಗಳವಾರ ರಾಜ್ಯಸಭೆ ಅಂಗೀಕಾರ ನೀಡಿತ್ತು. ತ್ರಿವಳಿ ತಲಾಖ್‍ನನ್ನು ಕ್ರಿಮನಲ್ ಅಪರಾಧವನ್ನಾಗಿ ಪರಿಗಣಿಸುವ ಈ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತ ಬಳಿಕ ಉಭಯ ಸದನಗಳಿಂದ ಅಂಗೀಕಾರ ದೊರೆತಂತಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link