ಪ್ರತಿವರ್ಷ ದೀದಿಯಿಂದ ಮೋದಿಗೆ ಕುರ್ತಾ ಗಿಫ್ಟ್!!!

ದೆಹಲಿ:

      ಪ್ರತಿ ವರ್ಷ ತಮಗೆ ಬೇಕಾದ ಕುರ್ತಾಗಳನ್ನು ಮಮತಾ ದೀದಿ ಸ್ವತಃ ಆಯ್ಕೆ ಮಾಡಿ, ಕಳುಹಿಸಿಕೊಡುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

       ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರಿಗೆ ನೀಡಿದ ಸಂದರ್ಶನದಲ್ಲಿ ಮೋದಿ ಹಲವು ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಂಡಿದ್ದಾರೆ. ಅಂದಾಜು 40 ನಿಮಿಷಗಳ ಕಾಲ ರಾಜಕೀಯೇತರ ಸಂಗತಿಗಳ ಬಗ್ಗೆ, ತಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

Image result for modi akshay kumar

 

     ಈ ವೇಳೆ ಮಮತಾ ದೀದಿ ಅವರು ಖುದ್ದಾಗಿ ತಾವೇ ಆಯ್ಕೆ ಮಾಡಿ ಪ್ರತಿ ವರ್ಷವೂ ನನಗೆ ಒಂದೆರಡು ಕುರ್ತಾಗಳನ್ನು ಈಗಲೂ ಕಳುಹಿಸಿಕೊಡುತ್ತಾರೆ ಎಂದರೆ ನೀವು ಅಚ್ಚರಿಪಡುವಿರಿ’ ಕುರ್ತಾಗಳನ್ನು ಮಾತ್ರವಲ್ಲ, ಪಶ್ಚಿಮ ಬಂಗಾಳದ ಅತ್ಯಂತ ಜನಪ್ರಿಯವಾದ ಸಿಹಿ ಖಾದ್ಯಗಳನ್ನು ಕೂಡ ಮಮತಾ ದೀದಿ ತಮಗೆ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ.

     ಸಂದರ್ಶನದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೂ ಸೇರಿದಂತೆ ಪ್ರತಿಪಕ್ಷಗಳ ಹಲವು ನಾಯಕರ ಜತೆಗೆ ಉತ್ತಮ ಸ್ನೇಹವಿದೆ ಎಂಬ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಹಿರಂಗಪಡಿಸಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap