ಇಸ್ರೊದಿಂದ ಪಿಎಸ್‌ಎಲ್ ವಿ-ಸಿ47 ಯಶಸ್ವಿ ಉಡಾವಣೆ!!

ಶ್ರೀಹರಿಕೋಟಾ: 

      ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಪಿಎಸ್‌ಎಲ್ ವಿ – 47 ರಾಕೆಟ್ ನ್ನು ಬುಧವಾರ ಬೆಳಗ್ಗೆ ಉಡಾಯಿಸಿದೆ.

      ಕಾರ್ಟೋಸ್ಯಾಟ್ 3 ಹಾಗೂ ಅಮೆರಿಕದ 13 ವಾಣಿಜ್ಯ ಬಳಕೆಯ ನ್ಯಾನೋ ಸ್ಯಾಟಲೈಟ್​ಗಳನ್ನು ಉಪಗ್ರಹಗಳನ್ನು ಹೊತ್ತೊಯ್ಯುವ ಪಿಎಸ್ಎಲ್​ವಿ-​​​ಸಿ47 ರಾಕೆಟ್ ಉಡಾವಣೆ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದು, ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಮತ್ತೊಂದು ಸಾಹಸ ನಡೆಸಿದೆ.

      ಈ ಮೊದಲಿನಂತೆ ಕಾರ್ಟೋಸ್ಯಾಟ್​-3 ಹೊತ್ತೊಯ್ಯುವ PSLV-C 47 ನ.25ರ ಬೆಳಗ್ಗೆ 9.28ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ನಂತರದಲ್ಲಿ ಉಡಾವಣೆ ಇಂದಿಗೆ ಮುಂದೂಡಿಕೆಯಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link