ಇಸ್ಲಾಮಾಬಾದ್:
ಭಾರತವೇನಾದರೂ ಪಾಕ್ ಮೇಲೆ ಯುದ್ಧ ಸಾರಿದರೆ ಪಾಕ್ ಉಳಿಯುವುದು ಸುಲಭವಲ್ಲ ಎಂಬ ಭಯದಿಂದ ಪಾಕ್ ತನ್ನ ರಕ್ಷಣೆಗಾಗಿ ವಿಶ್ವಸಂಸ್ಥೆಯ ಮೊರೆ ಹೋಗಿದೆ.
ಹೌದು, ಪುಲ್ವಾಮಾ ದಾಳಿಯ ನಂತರ ಭಾರತ-ಪಾಕಿಸ್ತಾನದ ನಡುವೆ ಯುದ್ಧ ಏರ್ಪಡುವಂಥ ಸನ್ನಿವೇಶ ನಿರ್ಮಾಣವಾದ ನಂತರ ಪಾಕ್ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ, ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.
“ಭಾರತವು ಪಾಕಿಸ್ತಾನದ ವಿರುದ್ಧ ತನ್ನ ಸೇನಾ ಶಕ್ತಿಯನ್ನು ಪ್ರಯೋಗಿಸುವ ಲಕ್ಷಣಗಳು ಎದ್ದು ಕಾಣುತ್ತಿವೆ. ಈ ಬಗ್ಗೆ ನಿಮ್ಮ ಗಮನ ಸೆಳೆಯಲು ಪತ್ರ ಬರೆಯುತ್ತಿದ್ದೇನೆ. ಈಗಾಗಲೇ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ವಿಷಯವನ್ನು ತುರ್ತಾಗಿ ಗಮನಿಸಬೇಕು” ಎಂದು ಪಾಕ್ ತನ್ನ ಪತ್ರದಲ್ಲಿ ತಿಳಿಸಿದೆ.
ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರನ್ನ ಹತ್ಯೆ ಮಾಡಿದ್ದರು. ಈ ಪೈಶಾಚಿಕ ಕೃತ್ಯ ನಡೆಸಿದ ಜೈಷ್ -ಎ-ಮೊಹಮ್ಮದ್ ಉಗ್ರರಿಗೆ ಪಾಕ್ ಈ ದಾಳಿಗೆ ಬೆಂಬಲ ನೀಡಿರೋದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯರು ಪಾಕಿಸ್ತಾನದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಇಂಡಿಯನ್ ಸಿನಿಮಾ ಇಂಡಿಸ್ಟ್ರೀ ಸಹ ಪಾಕ್ ಕಲಾವಿದರಿಗೆ ಅವಕಾಶ ನೀಡಬಾರದು ಎಂದು ನಿರ್ಧರಿಸಿದ್ದು, ಜೊತೆಗೆ ಭಾರತದ ಯಾವ ಸಿನಿಮಾ ಕೂಡ ಪಾಕಿಸ್ತಾನದಲ್ಲಿ ರಿಲೀಸ್ ಮಾಡುತ್ತಿಲ್ಲ. ಇಂದು ಕೂಡ ದೇಶದ ಅನ್ನದಾತರು ಪಾಕ್ಗೆ ಟೊಮ್ಯಾಟೋ ರಫ್ತು ಮಾಡದಿರಲು ನಿರ್ಧರಿಸಿದ್ದಾರೆ. ಅಲ್ಲದೇ ಇಡೀ ವಿಶ್ವವೇ ಪಾಕಿಸ್ತಾನದ ನಡೆಯನ್ನ ಖಂಡಿಸಿದೆ. ಈ ಎಲ್ಲಾ ಕಾರಣಗಳಿಂದ ಬೆಚ್ಚಿದ ಪಾಕ್, ವಿಶ್ವಸಂಸ್ಥೆಯ ಮೊರೆ ಹೋಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
