ಜಪಾನ್ ಓಪನ್ : ಕ್ವಾರ್ಟರ್ ಫೈನಲ್ ಗೆ ಸಿಂಧೂ!

ಟೊಕಿಯೊ:

      ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ನಲ್ಲಿ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ.ಸಿಂಧೂ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ. 

      ಇಂದು ನಡೆದ ಮಹಿಳಾ ಸಿಂಗಲ್ಸ್‌ ದ್ವಿತೀಯ ಸುತ್ತಿನ ಸೆಣಸಾಟದಲ್ಲಿ ಜಪಾನ್‌ನ ಅಯಾ ಓಹೊರಿ ವಿರುದ್ಧ 11-21, 21-10, 21-13ರ ಕಠಿಣ ಅಂತರದ ಗೆಲುವು ದಾಖಲಿಸಿರುವ ಸಿಂಧೂ ಅಂತಿಮ ಎಂಟರ ಘಟ್ಟಕ್ಕೆ ಮುನ್ನಡೆದರು.

      ಸಿಂಧೂ ಹಾಗೂ ಓಹೊರಿ ನಡುವಣ ಹೋರಾಟವು ಒಂದು ತಾಸು ಒಂದು ನಿಮಿಷದ ವರೆಗೂ ಮುಂದುವರಿದಿತ್ತು. ಕೊನೆಗೂ ಸ್ಥಳೀಯ ಆಟಗಾರ್ತಿ ವಿರುದ್ಧ ಮೇಲುಗೈ ಪಡೆದರು. 

     ಮುಂದಿನ ಸುತ್ತಿನಲ್ಲಿ ಅವರು ಜಪಾನ್‌ನ ಆಯಾ ಒಹೊರಿ ವಿರುದ್ಧ ಸೆಣಸುವರು. ಹೋದ ವಾರ ಮುಗಿದ ಇಂಡೊನೇಷ್ಯಾ ಓಪನ್‌ನಲ್ಲಿ ಸಿಂಧು ರನ್ನರ್‌ಅಪ್‌ ಆಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ