ಬೆಂಗಳೂರು:
ಭಾರತದ ಹೆಮ್ಮೆಯ ಬಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಆಟಗಾರ್ತಿಯಾಗಿ ಹೊರಹೊಮ್ಮಿದ್ದು, ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಅವರು ಚೀನಾದಲ್ಲಿ ನಡೆಯುತ್ತಿರುವ ಟೂರ್ 2018 ಫೈನಲ್ ನಲ್ಲಿ ಗೆಲ್ಲುವ ಮೂಲಕ ಭಾನುವಾರ(ಡಿಸೆಂಬರ್ 16)ದಂದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಅಂತಿಮ ಹಣಾಹಣಿಯಲ್ಲಿ ಜಪಾನ್ನಿನ ನೊಜೊಮಿ ಒಕುಹರಾ ಅವರನ್ನು 21-19, 21-17ರಲ್ಲಿ ಸೋಲಿಸಿ, ಪ್ರಶಸ್ತಿ ಗೆದ್ದರು. ಸೆಮಿಫೈನಲ್ ನಲ್ಲಿ ಥೈಲ್ಯಾಂಡ್ ನ ರಾಚ್ತಾನೋಕ್ ಇಂಟನಾನ್ ಅವರನ್ನು 21-16, 25-23ರಲ್ಲಿ ರೋಚಕವಾಗಿ ಸೋಲಿಸಿದ್ದರು.
ಈ ವರ್ಷದಲ್ಲಿನ ಒಂದೇ ಒಂದು ಪಂದ್ಯದಲ್ಲಿಯೂ ಪ್ರಶಸ್ತಿ ಗೆದ್ದಿಲ್ಲದಿದ್ದರೂ ಕೂಡ ಭಾರತದ ಶೆಟ್ಲರ್ ಸಿಂಧು, ಅಗ್ರ ಸ್ಥಾನದಲ್ಲಿದ್ದರು. ಆದರೆ ಇದೀಗ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಗೆದ್ದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ