ರಾಹುಲ್‌ ಆರೋಪಗಳಿಗೆ ಸ್ಪಷ್ಟನೆ ನೀಡಿದ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ !

ನವದೆಹಲಿ:
       ರಾಹುಲ್ ಗಾಂಧಿಯವರಿಗೆ ಸರ್ಕಾರದ ವಿರುಧ ವಾಕ್ಸಮರಕ್ಕಾಗಿ ಸಿಕ್ಕಿದ್ದ ಪ್ರಬಲ ಅಸ್ತ್ರ ರಫೇಲ್‌ ಒಪ್ಪಂದ ಆ ಅಸ್ತ್ರವನ್ನು ಅವರು ಪ್ರಯೋಗಿಸದ ಸಂದರ್ಭಗಳೆ ಇಲ್ಲಾ ಅನಿಸಿತ್ತದೆ.  ಆದರೆ ಪಾಪ ಎಲ್ಲಾ ಅಸ್ತ್ರಕ್ಕೂ ಅಂತ್ಯ ಿರುತ್ತದೇ ಎನ್ನುವುದನ್ನು ಕೊಂಚ ಮರೆತ್ತಿದ್ದ ಅವರಿಗೆ ಈಗ ಆಘಾತ ನೀಡಿದ್ದು ಮಾತ್ರ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಎರಿಕ್‌ ಟ್ರ್ಯಾಪಿಯರ್‌ ರಾಫೆಲ್ ಡೀಲ್ ಗಾಗಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆಯ ಆಯ್ಕೆ ಮಾಡಿದ್ದು ನಾವೇ ಹೊರತು ಇದರಲ್ಲಿ ಯಾರದ್ದೂ ಪಾತ್ರವಿಲ್ಲ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
       ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಎರಿಕ್‌ ಟ್ರ್ಯಾಪಿಯರ್‌, ‘ಭಾರತ ಮತ್ತು ಫ್ರಾನ್ಸ್‌ ನಡುವಿನ ರಫೇಲ್‌ ಫೈಟರ್‌ ಜೆಟ್‌ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆರೋಪಗಳು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.  
        ‘ನಾನೇನೂ ಸುಳ್ಳು ಹೇಳುತ್ತಿಲ್ಲ, ರಾಹುಲ್‌ ಗಾಂಧಿ ಅವರ ಆರೋಪಗಳಲ್ಲಿ ಹುರುಳಿಲ್ಲ. ರಫೇಲ್‌ ಡೀಲ್‌ ಬಗ್ಗೆ ನಾನು ಈ ಹಿಂದೆ ಮಾಡಿದ್ದ ಘೋಷಣೆಗಳು, ನೀಡಿದ್ದ ಹೇಳಿಕೆಗಳು ಸತ್ಯ. ಸುಳ್ಳು ಹೇಳುವ ಅಗತ್ಯತೆ ನನಗಂತೂ ಇಲ್ಲ. ನನ್ನ ಸಿಇಓ ಹುದ್ದೆಯಲ್ಲಿ ನೀವಿದ್ದರೆ ನೀವೂ ಸುಳ್ಳು ಹೇಳಲಾರಿರಿ ಎಂದು ಟ್ರ್ಯಾಪಿಯರ್ ತಿರುಗೇಟು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link