ದೆಹಲಿ:
ರಫೇಲ್ ಡೀಲ್ ಕುರಿತಂತೆ ಸುಪ್ರೀಂ ಅಂಗಳದಲ್ಲಿದ್ದ ಸಾಕಷ್ಟು ಅರ್ಜಿಗಳನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ತನಿಖೆಗೆ ಅಸಮ್ಮತಿ ಸೂಚಿಸಿದೆ.
ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ. ಫ್ರಾನ್ಸ್ ನಿಂದ ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಭಾರತ ಮಾಡಿಕೊಂಡಿದ್ದ ಒಪ್ಪಂದದಲ್ಲಿ ಸಾಕಷ್ಟು ಅವ್ಯವಹಾರವಾಗಿದೆ ಎಂದು ದೂರಲಾಗಿತ್ತು. ಕೇಂದ್ರ ಸರ್ಕಾರ ಹಾಗೂ ಅರ್ಜಿದಾರರ ವಾದ ಆಲಿಸಿದ್ದ ನ್ಯಾಯಪೀಠ, ಇಂದು ತನ್ನ ತೀರ್ಪು ಪ್ರಟಕಟಿಸಿದೆ. ಅದರಂತೆ ರಫೇಲ್ ಡೀಲ್ ಅನ್ನು ತನಿಖೆಗೆ ಒಪ್ಪಿಸಲು ಸುಪ್ರೀಂ ಕೋರ್ಟ್ ಅಸಮ್ಮತಿ ವ್ಯಕ್ತಪಡಿಸಿದೆ.
ರಫೇಲ್ ಡೀಲ್ ಕುರಿತಂತೆ ಸುಪ್ರೀಂ ಅಂಗಳದಲ್ಲಿ ಸಾಕಷ್ಟು ಅರ್ಜಿಗಳಿದ್ದವು. ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ತೀರ್ಪನ್ನು ಡಿ.14 ಕ್ಕೆ ಕಾಯ್ದಿರಿಸಿತ್ತು. ಇಂದು ತನ್ನ ತೀರ್ಪು ಪ್ರಕಟಿಸಿದೆ. ಇದರಿಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಾಳಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
