ಅಮೇಥಿಯಲ್ಲಿ ರಾಹುಲ್ ನಾಮಪತ್ರ : ಸೋನಿಯಾ-ಪ್ರಿಯಾಂಕಾ ಸಾಥ್!!

ಅಮೇಥಿ:

      ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಉತ್ತರಪ್ರದೇಶದ ಅಮೇಥಿಯಿಂದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

      2019ರ ಆಮೇಠಿ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಈ ಹಿನ್ನೆಲೆ ಆಮೇಠಿಯಲ್ಲಿ ಬೃಹತ್‌ ರೋಡ್‌ಶೋ ನಡೆಸಿದ್ದಾರೆ. ಈ ವೇಳೆ ರಾಹುಲ್‌  ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕ ಗಾಂಧಿ ಮತ್ತು ಅವರ ಪತಿ ರಾಬರ್ಟ್‌ ವಾದ್ರ ಮತ್ತು ಇಬ್ಬರು ಮಕ್ಕಳು ಸಾಥ್ ನೀಡಿದ್ದಾರೆ. 

      ನಂತರ ಆಯೋಗದ ಕಚೇರಿಗೆ ತೆರಳಿದ ರಾಹುಲ್ ಗಾಂಧಿ ಅಧಿಕಾರಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ರಾಹುಲ್ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಿ ಹಾಗೂ ಭಾವ ರಾಬರ್ಟ್ ವಾದ್ರಾ ಉಪಸ್ಥಿತರಿದ್ದರು.

      ಏಪ್ರಿಲ್‌ 4ರಂದು ಕೇರಳದ ವಾಯನಾಡುವಿನಿಂದ ಲೋಕಸಭೆಗೆ ಆಯ್ಕೆ ಬಯಸಿ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಸಂದರ್ಭದಲ್ಲೂ ಸಹೋದರಿ ಪ್ರಿಯಾಂಕ ಗಾಂಧಿ ಜತೆಗೂಡಿದ್ದರು. ಒಟ್ಟಾರೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈ ಬಾರಿ 2 ಕ್ಷೇತ್ರಗಳಿಂದ ಚುನಾವಣೆಗೆ ಇಳಿದಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

 

Recent Articles

spot_img

Related Stories

Share via
Copy link
Powered by Social Snap