ಟೊರೊಂಟೊ :
ಬಹುಭಾಷಾ ನಟಿ ರಂಭಾ ಅವರು ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಪತಿ ಇಂದ್ರನ್ ಪದ್ಮನಾಥಮ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ನಟಿ ರಂಭಾ ಕೆಲವು ತಿಂಗಳುಗಳ ಹಿಂದೆ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಇದಕ್ಕೆ ಸಂಬಂಧಪಟ್ಟ ಫೊಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ಸೆಪ್ಟೆಂಬರ್ 23 ರಂದು ಟೊರೊಂಟೊದ ‘ಮೌಂಟ್ ಸಿನೈ’ ಆಸ್ಪತ್ರೆಯಲ್ಲಿ ನಟಿ ರಂಭಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತನ್ನ ಪತಿ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ರವಾನಿಸಿದ್ದಾರೆ.
ನಟಿ ರಂಭಾ 2010 ರಲ್ಲಿ ಉದ್ಯಮಿ ಇಂದ್ರನ್ ಪದ್ಮನಾಥಮ್ ಅವರನ್ನು ತಿರುಮಲದಲ್ಲಿ ವಿವಾಹವಾಗಿ, ಭಾರತ ತೊರೆದು ಟೊರೊಂಟೊದಲ್ಲಿ ನೆಲೆಸಿದ್ದರು. ರಂಭಾ ಅವರಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಈ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇದರಿಂದ ಪದ್ಮನಾಬಮ್ ಅವರ ಕುಟುಂಬದಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ ಎಂದು ತಿಳಿದು ಬಂದಿದೆ. ಇಬ್ಬರು ಹೆಣ್ಣುಮಕ್ಕಳ ನಂತರ ಮೂರನೇ ಮಗು ಗಂಡು ಆಗಿರುವುದು ಮತ್ತಷ್ಟು ಸಂತಸ ತಂದುಕೊಟ್ಟಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
