ಮುಂಬೈ:
ಸತತ ನಾಲ್ಕನೇ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರ ಇಳಿಸುವ ಮೂಲಕ ತನ್ನ ಪ್ರಮುಖ ಬಡ್ಡಿದರಗಳನ್ನು ಇಳಿಕೆ ಮಾಡಲಿದೆ.
6 ಸದಸ್ಯರನ್ನೊಳಗೊಂಡ ವಿತ್ತೀಯ ನೀತಿ ಸಮಿತಿ(ಎಂಪಿಸಿ) ಇಂದು ರೆಪೊ ದರವನ್ನು 35 ಬೇಸಿಸ್ ಪಾಯಿಂಟ್ ಗಳಿಂದ ಶೇಕಡಾ 5.40ಗೆ ರೆಪೊ ದರ ಇಳಿಕೆ ಮಾಡಿದೆ.
ಆರ್.ಬಿ.ಐ.ನ ಈ ನಿಲುವಿನಿಂದ ಗೃಹ ಸಾಲ ಹಾಗೂ ವಾಹನ ಸಾಲದ ಮೇಲಿನ ಬಡ್ಡಿ ಕಡಿಮೆಯಾಗಲಿದೆ. ತಿಂಗಳ ಇಎಂಐ ಕಡಿಮೆಯಾಗಲಿದ್ದು, ಗ್ರಾಹಕರು ಮತ್ತೆ ನಿಟ್ಟುಸಿರು ಬಿಡಲಿದ್ದಾರೆ. ಮೊದಲು ರೆಪೋ ದರ ಶೇಕಡಾ 5.75 ನಷ್ಟಿತ್ತು. ಆರ್.ಬಿ.ಐ. ರೆಪೋ ದರ ಇಳಿಕೆ ಮಾಡ್ತಿದ್ದಂತೆ ಬ್ಯಾಂಕ್ ಗಳಿಗೆ ಬಿಸಿ ತಟ್ಟಲಿದೆ. ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಬೇಕಾಗುತ್ತದೆ.
ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಗೆ ಚೈತನ್ಯ ನೀಡಲು ರಿಸರ್ವ್ ಬ್ಯಾಂಕ್ ರೆಪೊ ದರವನ್ನುಇಳಿಕೆ ಮಾಡಿದೆ. ಇದರ ಲಾಭ ನೇರವಾಗಿ ಗ್ರಾಹಕರ ಮೇಲಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ