ರೆಪೋ ದರ ಇಳಿಕೆ : ಗೃಹ-ವಾಹನ ಸಾಲ ಇಳಿಕೆ ಸಾಧ್ಯತೆ!!

ದೆಹಲಿ :

      ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ಪಾಲಿಸಿ ಸಮಿತಿ ರೆಪೋ ದರದಲ್ಲಿ 25 ಅಂಶ ಕಡಿತ ಮಾಡಿದೆ. 

      ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಇಂದು ಗುರುವಾರ ಹಣಕಾಸು ನೀತಿಯನ್ನು ಪ್ರಕಟಿಸಿತು.

      ಭಾರತೀಯ ರಿಸರ್ವ್‌ ಬ್ಯಾಂಕ್‌, ರೆಪೋ ದರವನ್ನು ನಿರಂತರ ಮೂರನೇ ಬಾರಿಗೆ ಶೆ.0.25 ಪ್ರಮಾಣದಲ್ಲಿ ಕಡಿತ ಮಾಡಿದ್ದು, ರೆಪೋ ದರ ಈಗ ಶೇ.5.75ಕ್ಕೆ ಇಳಿದಿದೆ. 

      ಅಷ್ಟೇ ಅಲ್ಲದೇ ಆರ್​ಟಿಜಿಎಸ್​ ಮತ್ತು ಎನ್​ಇಎಫ್​ಟಿ ಶುಲ್ಕಗಳನ್ನೂ ಆರ್​ಬಿಐ ರದ್ದುಗೊಳಿಸಿದೆ. ಈ ಸೌಲಭ್ಯವನ್ನು ಗ್ರಾಹಕರಿಗೆ ತಲುಪಿಸಲು ಎಲ್ಲ ಬ್ಯಾಂಕ್​ಗಳಿಗೆ ಆರ್​ಬಿಐ ಸೂಚಿಸಿದೆ.

      ರೆಪೊ ದರ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗುವ ನಿರೀಕ್ಷೆಯಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗ ರೆಪೋ ದರ ಇಳಿಕೆ ಮಾಡಿರುವುದರಿಂದ ಬ್ಯಾಂಕುಗಳು ಇದರ ಲಾಭವನ್ನು ತನ್ನ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಯಿದೆ.

      2013ರಲ್ಲಿ ಆರ್‌ಬಿಐ ರೆಪೊ ದರವನ್ನು ಇಳಿಸಿತ್ತು. ದಶಕಗಳಲ್ಲಿ ಮೊದಲ ಬಾರಿ ಆರ್ಥಿಕ ಪ್ರಗತಿ ಇಳಿಕೆಯಾದ ಹಿನ್ನೆಲೆಯಲ್ಲಿ ಆರ್‌ಬಿಐ ಈ ಹೆಜ್ಜೆ ಇಟ್ಟಿತ್ತು. 

      ಆರ್‌ಬಿಐ ಈ ವರ್ಷ ಎರಡು ಹಂತದಲ್ಲಿ ರೆಪೊ ದರ ಇಳಿಸಿದ್ದು, ಶೇ.6.5 ರಿಂದ 6ಕ್ಕೆ ಇಳಿಸಿತ್ತು. ಪ್ರಧಾನಿ ನರೇಂದ್ರ ಮೋದಿ 2.0 ಸರಕಾರ ಅಧಿಕಾರ ಸ್ವೀಕರಿಸಿದ ಬಳಿಕದಲ್ಲಿ ತನ್ನ ಮೊದಲ ಹಣಕಾಸು ನೀತಿ ಇದಾಗಿದೆ.

Recent Articles

spot_img

Related Stories

Share via
Copy link
Powered by Social Snap