ಇನ್ನು 3 ತಿಂಗಳು ಸಾಲದ ಮೇಲಿನ EMI ಕಟ್ಟುವಂತಿಲ್ಲ!!

ನವದೆಹಲಿ :

       ಭಾರತೀಯ ರಿಸರ್ವ್ ಬ್ಯಾಂಕ್  ಸಾಲದ ಮೇಲಿನ ಇಎಂಐ ಪಾವತಿಗೆ ಕಾಲಾವಕಾಶವನ್ನು ನೀಡಿ  ಆಗಸ್ಟ್​​ ವರೆಗೂ ವಿನಾಯಿತಿ ಘೋಷಿಸಿದೆ.

      ಈ ಹಿಂದೆಯೇ ಆರ್​ಬಿಐ 3 ತಿಂಗಳ ಅವಧಿಗೆ ಅಂದ್ರೆ ಮೇವರೆಗೂ ಇಎಂಐ ಪಾವತಿಗೆ ವಿನಾಯಿತಿ ನೀಡಿತ್ತು. ಇದೀಗ ಮತ್ತೆ ಇನ್ನು ಮೂರು ತಿಂಗಳ ಅವಧಿ ಅಂದ್ರೆ ಆಗಸ್ಟ್ 31ರವರೆಗೂ ಸಾಲದ ಮೇಲಿನ ಇಎಂಐ ವಿಸ್ತರಣೆ ಮಾಡಲಾಗಿದೆ.  

      ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಭಾರತ ಲಾಕ್‌ಡೌನ್ ಮಾಡಿದ ನಂತರ ಶಕ್ತಿಕಾಂತ ದಾಸ್ ಅವರ ಮೂರನೇ ಪತ್ರಿಕಾಗೋಷ್ಠಿ ಮಾಡುತ್ತಿದ್ದು, ರೆಪೋ ದರ ಕಡಿತ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

     ಲಾಕ್​ಡೌನ್​ ಸಡಿಲಿಕೆ ಬಳಿಕವೂ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆರ್​​ಬಿಐ ದಿಟ್ಟ ಕ್ರಮ ಕೈಗೊಂಡಿದೆ. ಸಾಲದ ಮೇಲಿನ ಇಎಂಐ ಮರುಪಾವತಿಯನ್ನು ಇನ್ನು ಮೂರು ತಿಂಗಳು ವಿಸ್ತರಣೆ ಮಾಡಿದೆ. ಈ ಮೂಲಕ ಮಧ್ಯಮ ವರ್ಗಕ್ಕೆ ಮತ್ತೆ ರಿಲೀಫ್ ನೀಡಿದೆ.

      ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತ ಮಾಡಲಾಗಿದೆ. ಈ ಮೂಲಕ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರಿಗೆ ಸಾಲ ನೀಡಲು ಸಹಾಯವಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ರೆಪೊ ಸಾಲ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ 4% ಕ್ಕೆ ಇಳಿಸಿದೆ. 

      ಅದೇ ರೀತಿ ಗ್ರಾಹಕರು ಬ್ಯಾಂಕ್ ಗಳಲ್ಲಿ ಇಡುವ ಡೆಪಾಸಿಟ್ ಮೇಲಿನ ಬಡ್ಡಿ ದರ ಕೂಡ ಕಡಿಮೆ ಆಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ನಗದು ಚಲಾವಣೆ ಹೆಚ್ಚಾಗಬೇಕು ಎಂಬ ಪ್ರಯತ್ನದ ಭಾಗವಾಗಿ ಬಡ್ಡಿ ದರವನ್ನು ಇಳಿಕೆ ಮಾಡಲಾಗುತ್ತಿದೆ. ಇದರಿಂದ ಸಾಲಕ್ಕೆ ಕಟ್ಟುವ ಇಎಂಐ ಕಡಿಮೆ ಆಗುತ್ತದೆ.

      ಲಾಕ್ ಡೌನ್ ಜಾರಿಯಾಗಿದ್ದರಿಂದ ಮೊದಲಿಗೆ ಇಎಂಐ ಪಾವತಿಯನ್ನು 3 ತಿಂಗಳು ಮುಂದೂಡಿದ್ದ ಆರ್ಬಿಐ ಈಗ ರೆಪೋ ದರ ಕಡಿತ ಮಾಡಿದೆ.