RBI ನಿಂದ ಗುಡ್ ನ್ಯೂಸ್ : EMI ಕಟ್ಟುವವರಿಗೆ 3 ತಿಂಗಳು ರಿಲೀಫ್‌!!

ನವದೆಹಲಿ:

     ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ  ಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ಆರ್ ಬಿಐ ಗವರ್ನರ್ ಸಾಲಗಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 3 ತಿಂಗಳ ಇಎಂಐ ಮುಂದೂಡಿದೆ.

      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಎಲ್ಲಾ ಬ್ಯಾಂಕ್ ಗಳ ವೈಯಕ್ತಿಕ ಸಾಲ, ಗೃಹ, ವಾಹನ ಸಾಲ ಸೇರಿದಂತೆ ದೀರ್ಘಾವಧಿ ಸಾಲಗಳ ಮಾಸಿಕ ಕಂತು ಪಾವತಿಯನ್ನು 3 ತಿಂಗಳ ವರೆಗೂ ಮುಂದೂಡುವ ಅವಕಾಶ ಕಲ್ಪಿಸಿದೆ. ಎಲ್ಲ ಬ್ಯಾಂಕ್‌ಗಳು ಇಎಂಐ ಪಾವತಿಗೆ 3 ತಿಂಗಳ ಅವಕಾಶ ನೀಡಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. 

      21 ದಿನಗಳ ಕೊರೊನಾವೈರಸ್ ಲಾಕ್‌ಡೌನ್‌ನ ಪರಿಣಾಮವನ್ನು ಎದುರಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  1.7 ಲಕ್ಷ ಕೋಟಿ ಪ್ಯಾಕೇಜ್ ಬಿಡುಗಡೆ ಮಾಡಿದ ಒಂದು ದಿನದ ನಂತರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಬಡ್ಡಿದರಗಳನ್ನು 75 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿದ್ದಾರೆ. 

     ಆರ್‌ಬಿಐ ನ 150 ಮಂದಿ ಸಿಬ್ಬಂದಿ ಹೋಂ ಕ್ವಾರಂಟೈನಲ್ಲಿ ಇದ್ದಾರೆ ಎಂದು ಹೇಳಿದ ಅವರು, ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಲವು ತೀರ್ಮಾನಗಳನ್ನು ತಗೆದುಕೊಳ್ಳಲಾಗಿದೆ. ಇನ್ನೂ 3 ತಿಂಗಳ ತನಕ ಇಎಂಐ ಕಟ್ಟುವಿಕೆಯನ್ನು ಮುಂದೂಡಲಾಗಿದೆ. ಈ ಮೂಲಕ ಸಾಲಗಳನ್ನು ಪಡೆದುಕೊಂಡಿದ್ದ ಹಲವು ಮಂದಿಗೆ ಬಿಗ್ ರಿಲೀಫ್‌ ಸಿಕ್ಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap