ನವದೆಹಲಿ:
ಇಂದು ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಪ್ರವಾಣದಲ್ಲಿ ಇಳಿಕೆ ಕಂಡಿದೆ. ರೂಪಾಯಿ ಮೌಲ್ಯ 73.25 ಕ್ಕೆ ಬಂದು ನಿಂತಿದೆ. ಡಾಲರ್ ಗೆ ಹೆಚ್ಚಿದ ಬೇಡಿಕೆ ರೂಪಾಯಿ ಮೌಲ್ಯದಲ್ಲಿ ಇಳಿಕೆಗೆ ಕಾರಣವಾಗಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 34 ಪೈಸೆ ಇಳಿಕೆ ಕಂಡು 73.25 ರ ಮಟ್ಟಕ್ಕೆ ಬಂದು ನಿಂತಿದೆ. ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 72.91 ರ ಮಟ್ಟದಲ್ಲಿತ್ತು. ಸೋಮವಾರ ವಿದೇಶಿ ಹೂಡಿಕೆದಾರರು 1,842 ಕೋಟಿ ರೂಪಾಯಿ ಷೇರನ್ನು ಮಾರಾಟ ಮಾಡಿದ್ದರು.
ಸೋಮವಾರ ಕೂಡ ಡಾಲರ್ ಎದುರು ರೂಪಾಯಿ ಮೌಲ್ಯ 43 ಪೈಸೆ ಇಳಿಕೆ ಕಂಡಿತ್ತು. ಡಾಲರ್ ಗೆ ಬೇಡಿಕೆ ಹೆಚ್ಚಾಗುವ ಜೊತೆಗೆ ಹಣಕಾಸಿನ ಕೊರತೆ ಹೆಚ್ಚಾಗುವ ಚಿಂತೆ ಕಾಡ್ತಿದೆ. ಭಾರತದ ಬಂಡವಾಳ ವಿದೇಶಕ್ಕೆ ಹೋಗ್ತಿರುವುದು ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗ್ತಿದೆ.
ಇನ್ನು ಷೇರು ಮಾರುಕಟ್ಟೆಯಲ್ಲಿ ಕೂಡ ನೀರಸ ಬೆಳವಣಿಗೆ ಕಂಡು ಬಂದಿದೆ. ಸೆನ್ಸೆಕ್ಸ್ 241 ಪಾಯಿಂಟ್ ಹಾಗೂ ನಿಫ್ಟಿ 90 ಪಾಯಿಂಟ್ ಇಳಿಕೆ ಕಂಡು ವಹಿವಾಟು ಶುರು ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ