ಚಂಡೀಘಡ್:
ಕಳೆದ 55 ವರ್ಷಗಳಿಂದ ಬಾಲಕರ ಪ್ರವೇಶಕ್ಕೆ ಮಾತ್ರ ಸೀಮಿತವಾಗಿದ್ದ, ಸೈನಿಕ ಶಾಲೆಗಳಲ್ಲಿ ಇನ್ನು ಮುಂದೆ ಬಾಲಕಿಯರಿಗೂ ಪ್ರವೇಶ ನೀಡಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.
ಕಳೆದ 55 ವರ್ಷಗಳ ಹಿಂದೆ ದೇಶದಲ್ಲಿ ಸೈನಿಕ ಶಾಲೆಗಳು ಆರಂಭವಾಗಿದ್ದವು. ಈ ಶಾಲೆಗಳಿಗೆ ಬಾಲಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದ್ದು ಬಾಲಕಿಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೈನಿಕ ಶಾಲೆಗಳಿಗೆ ಬಾಲಕಿಯರಿಗೆ ಪ್ರವೇಶ ನೀಡುವ ಮಹತ್ವದ ತೀರ್ಮಾನವನ್ನು ಇದೀಗ ರಕ್ಷಣಾ ಸಚಿವಾಲಯ ಕೈಗೊಂಡಿದೆ. ಈ ವಿಷಯವನ್ನು ಚಂಡೀಘಡ ರಾಜ್ಯ ರಕ್ಷಣಾ ಸಚಿವ ಡಾ: ಸುಭಾಷ್ ರಾಮರಾಯ್, ಭಾಮ್ರೆ ಖಚಿತಪಡಿಸಿದ್ದಾರೆ.
ತಕ್ಷಣವೇ ಈ ನಿರ್ಧಾರವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಎಲ್ಲಾ ಸೈನಿಕ ಶಾಲೆಗಳಲ್ಲಿ ಅಗತ್ಯ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದಲೇ ಬಾಲಕಿಯರನ್ನು ಸೇರಿಸಿಕೊಳ್ಳಲಾಗುತ್ತದೆ. ಆದರೆ ಈ ಸಂಖ್ಯೆ ಆರಂಭದಲ್ಲಿ ಸೀಮಿತವಾಗಿರುತ್ತದೆ ಎಂದು ಮೂಲಗಳು ಹೇಳಿವೆ.
ಪ್ರತಿಷ್ಟಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಬಾಲಕಿಯರಿಗೆ ಪ್ರವೇಶ ನೀಡುವ ನಿಟ್ಟಿನಲ್ಲಿ ಇದು ರಕ್ಷಣಾ ಸಚಿವಾಲಯದ ಮೊದಲ ಹೆಜ್ಜೆ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ