ಮುಂಬೈ:

ವಿಡಿಯೋ ಮಾಡಿಕೊಳ್ಳುತ್ತಿದ್ದ ವೇಳೆ ಪತ್ರಕರ್ತರ ಮೊಬೈಲ್ ಫೋನ್ ಕಸಿದುಕೊಂಡ ಹಿಂದಿ ಚಿತ್ರ ನಟ ಸಲ್ಮಾನ್ ಖಾನ್ ವಿರುದ್ಧ ದೂರು ದಾಖಲಾಗಿದೆ.
ಅಶೋಕ್ ಶ್ಯಾಮ್ ಲಾಲ್ ಪಾಂಡೆ ದೂರು ದಾಖಲಿಸಿದ ಪತ್ರಕರ್ತ. ಜುಹುಯಿಂದ ಕಾನ್‌ದಿವಾಲಿಗೆ ಮುಂಬೈ ಮೂಲಕ ಪ್ರಯಾಣ ಮಾಡುತ್ತಿದ್ದ ಪತ್ರಕರ್ತ ಅಶೋಕ್ ಶ್ಯಾಮ್‌ಲಾಲ್ ಪಾಂಡೆ ರಸ್ತೆಯಲ್ಲಿ ಸಲ್ಮಾನ್ ಖಾನ್ ಸೈಕಲಿಂಗ್ ಮಾಡುತ್ತಿದ್ದುದ್ದನ್ನು ನೋಡಿದ್ದಾರೆ. ಆ ಕ್ಷಣವೇ ಸಲ್ಲು ಬಾಡಿಗಾಡ್ ಬಳಿ ವಿಡಿಯೋ ಸೆರೆ ಹಿಡಿಯುವುದಾಗಿ ಹೇಳಿದ್ದಾರೆ. ಆನಂತರ ಸೆರೆ ಹಿಡಿಯುವಾಗ ಬಾಡಿಗಾರ್ಡ್‌ವೊಬ್ಬ ಫೋನ್ ಕಿತ್ತುಕೊಂಡಿದ್ದಾರೆ.
ಸಲ್ಮಾನ್ ಅಂಗ ರಕ್ಷಕನಿಂದ ಒಪ್ಪಿಗೆ ಪಡೆದು ಫೋಟೋ ಕ್ಲಿಕ್ ಮಾಡಲು ಪಾಂಡೆ ಮುಂದಾಗಿದ್ದ. ಆದರೆ ಸಲ್ಮಾನ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆಗ ಪಾಂಡೆ ಹಾಗೂ ಸಲ್ಮಾನ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಪಾಂಡೆಯ ಮೊಬೈಲ್ ಅನ್ನು ಸಲ್ಲು ಕಿತ್ತೊಯ್ದಿದ್ದಾರೆ. ಈ ವಿಚಾರವನ್ನು ಪಾಂಡೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








