ಬೆಂಗಳೂರು :
ನಟ ಕಿಚ್ಚ ಸುದೀಪ್ ಅಭಿಮಾನಿಗಳು ಸದ್ಯ ಕಾಯುತ್ತಿರುವ ಸಿನಿಮಾಗಳ ಪೈಕಿ ‘ಪೈಲ್ವಾನ್’ ಕೂಡ ಒಂದಾಗಿದೆ. ಈ ಸಿನಿಮಾದ ಕುರಿತು ಸುದೀಪ್ ಈಗ ಹೊಸ ಸುದ್ದಿ ಹಂಚಿಕೊಂಡಿದ್ದಾರೆ.
‘ಪೈಲ್ವಾನ್’ ಸಿನಿಮಾದ ಮೊದಲ ಟೀಸರ್ ಡೇಟ್ ಅನ್ನು ಸುದೀಪ್ ಇದೀಗ ತಿಳಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಟೀಸರ್ ಹೊರ ಬರುವ ದಿನವನ್ನು ಬಹಿರಂಗ ಪಡಿಸಿದ್ದಾರೆ. ಅಂದಹಾಗೆ, ಚಿತ್ರದ ಮೊದಲ ಟೀಸರ್ ಜನವರಿ 15 ರಂದು ಸಂಜೆ 4.45ಕ್ಕೆ ಬಿಡುಗಡೆಯಾಗಲಿದೆಯಂತೆ.
Happy to announce the 1st official teaser, Kannada version to be released on Jan 15th at 4.45pm. Have a sneak peek into the world of #Pailwaan
My best wshs to th entire team.@krisshdop @iswapnakrishna @ArjunjanyaAJ #PailwaanTeaserOn15th
??✨— Kichcha Sudeepa (@KicchaSudeep) January 7, 2019
‘ಪೈಲ್ವಾನ್’ ಎಂಟು ಭಾಷೆಗಳಲ್ಲಿ ಬರುತ್ತಿರುವ ಸಿನಿಮಾವಾಗಿದ್ದು, ಮೊದಲು ಕನ್ನಡದ ಟೀಸರ್ ರಿಲೀಸ್ ಆಗಲಿದೆ. ಟೀಸರ್ ಡೇಟ್ ಜೊತೆಗೆ ತಮ್ಮ ಚಿತ್ರತಂಡಕ್ಕೆ ಟ್ವಿಟ್ಟರ್ ನ ಮೂಲಕ ಕಿಚ್ಚ ಶುಭ ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ