ಭಾರತ ಸೇರಿ 20 ರಾಷ್ಟ್ರಗಳಿಂದ ಸೌದಿ ಅರೇಬಿಯಾ ಪ್ರವೇಶ ಬಂದ್!!

ದೆಹಲಿ :

      ಭಾರತ ಮತ್ತು ಅಮೆರಿಕ ಸೇರಿದಂತೆ 20 ರಾಷ್ಟ್ರಗಳ ವಿಮಾನ ಹಾರಾಟವನ್ನು ಸೌದಿ ಅರೇಬಿಯಾ ರದ್ದುಗೊಳಿಸಿದೆ.

     ದುಬೈ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬುಧವಾರದಿಂದ(ಫೆ.20) 20 ರಾಷ್ಟ್ರಗಳ ಅಂತಾರಾಷ್ಟ್ರೀಯ ವಿಮಾನಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ಪ್ರಕಟಿಸಿದೆ.

     ಯುಎಸ್ ಮತ್ತು ಭಾರತದ ಹೊರತಾಗಿ, ಅರ್ಜೆಂಟೀನಾ, ಬ್ರೆಜಿಲ್, ಇಂಡೋನೇಷ್ಯಾ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾದ ಪ್ರಯಾಣಿಕರು ಸಹ ಸೌದಿ ಅರೇಬಿಯಾಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ಈ ನಿಷೇಧ ಜಾರಿಗೆ ಬರುವ 14 ದಿನಗಳಿಗೆ ಮೊದಲೇ, 20 ನಿಷೇಧಿತ ದೇಶಗಳ ಮೂಲಕ ಹಾದುಹೋದ ಪ್ರಯಾಣಿಕರಿಗೂ ಈ ತಾತ್ಕಾಲಿಕ ನಿಷೇಧ ಅನ್ವಯಿಸುತ್ತದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ತಿಳಿಸಿದೆ.

     ರಾಜತಾಂತ್ರಿಕರು, ಸೌದಿ ನಾಗರಿಕರು, ವೈದ್ಯಕೀಯ ಸಿಬ್ಬಂದಿಗಳು ಮತ್ತು ಅವರ ಕುಟುಂಬಗಳಿಗಾಗಿ ವಿನಾಯಿತಿ ನೀಡಲಾಗುವುದು ಎಂದು ಸೌದಿಯ ರಾಜ್ಯ ಸುದ್ದಿ ಸಂಸ್ಥೆ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap