ಮಲ್ಯಾ ಆಸ್ಪತ್ರೆಗೆ ದಾಖಲಾದ ಶಿವಣ್ಣ!!!

ಬೆಂಗಳೂರು:      Related image      ಸೆಂಚುರಿ ಸ್ಟಾರ್, ಸ್ಯಾಂಡಲ್ ವುಡ್ ನ ಅತ್ಯಂತ ಬಿಜಿ ನಟ ಶಿವರಾಜ್ ಕುಮಾರ್ ರವರಿಗೆ ನಿನ್ನೆ ರಾತ್ರಿಯೇ ಜ್ವರ ಕಾಣಿಸಿಕೊಂಡಿದ್ದು, ಇಂದು ಬೆಳಗ್ಗೆ ಶಿವಣ್ಣ ರನ್ನ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

       ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿರುವ ಶಿವಣ್ಣ ರುಸ್ತುಂ ಮತ್ತು ದ್ರೋಣ ಚಿತ್ರೀಕರಣದಲ್ಲಿ ಸತತವಾಗಿ ಭಾಗಿಯಾಗಿದ್ದರಿಂದಾಗಿ ಆಯಾಸಗೊಂಡಿದ್ದರು, ಎನ್ನಲಾಗಿದೆ. 

      ಶಿವಣ್ಣ ಜೊತೆ ಪತ್ನಿ ಗೀತಾ ಹಾಗೂ ಕುಟುಂಬಸ್ಥರು ಮಲ್ಯ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯವನ್ನು ವಿಚಾರಿಸಲು ಕುಟುಂಬದವರು ಹಾಗೂ ಚಿತ್ರ ರಂಗದವರು ಆಗಮಿಸುತ್ತಿದ್ದಾರೆ. ಯುವ ರಾಜ್​​​ಕುಮಾರ್ ಮತ್ತು ಭಾವಿ ಸೊಸೆ ಶ್ರೀದೇವಿ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದರು. ಅಲ್ಲದೇ ಸಹೋದರ ಪುನಿತ್​ ರಾಜ್​ಕುಮಾರ್​ ಹಾಗೂ ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಿರ್ದೇಶಕ ಪ್ರೇಮ್ ಹಾಗೂ ರಘುರಾಮ್ ಸಹ ಆರೋಗ್ಯ ವಿಚಾರಿಸಿದರು.

      ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶಿವಣ್ಣನಿಗೆ ಏನು ಆಗಿಲ್ಲ ಸ್ವಲ್ಪ ಜ್ವರ ಹೆಚ್ಚಾಗಿರೋದ್ರಿಂದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈಗ ಜ್ವರ ಕಡಿಮೆಯಾಗಿದೆ. ಡಿಸ್ಚಾರ್ಜ್ ಬಗ್ಗೆ ವೈಧ್ಯರು ಇನ್ನು ತಿಳಿಸಿಲ್ಲ ಎಂದು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ