ಬೆಳ್ಳಂ ಬೆಳಗೆ ನಗರದಲ್ಲಿ ಶೂಟೌಟ್ !!!

  ಕಲಬುರಗಿ ಹೊರವಲಯ ಶಾಬಾದ್ ರಸ್ತೆಯಲ್ಲಿ ಕೊಲೆ ಆರೋಪಿ ಸಂತೋಷ್ ಸ್ವಾಮಿ ಮೇಲೆ ಆರ್ ಜಿ ನಗರ ಪಿಎಸ್ಐ ಮಹಾಂತೇಶ ಪಾಟೀಲ್ ಗುಂಡು ಹಾರಿಸಿದ್ದಾರೆ. ಆರೋಪಿ ಸಂತೋಷ್ ಸ್ವಾಮಿಯ ಎರಡೂ ಕಾಲಿಗೆ ಗುಂಡೇಟು ತಗುಲಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

  ಕೊಲೆ ಆರೋಪಿ ಸಂತೋಷ್​ನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ ಸಂತೋಷ್ ಮೇಲೆ ಆತ್ಮರಕ್ಷಣೆಗಾಗಿ ಪಿಎಸ್ಐ ಮಹಾಂತೇಶ್ ಪಾಟೀಲ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ತಿಳಿಸಿದರೂ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
 
ಆಗ ಮತ್ತೆ ಎರಡು ಸುತ್ತು ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಪಿಎಸ್ಐ ಮಹಾಂತೇಶ್ ಪಾಟೀಲ್, ಸಿಬ್ಬಂದಿ ಹಾಜಿ ಮಲಂಗ್, ಪ್ರಮೋದ್​ ಮೂವರಿಗೆ ಗಾಯಗಳಾಗಿದ್ದು ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲೆಯ ಮತ್ತೊಬ್ಬ ಆರೋಪಿ ನಾಗರಾಜ್​ನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾಗಿ ಎಸ್ಪಿ ಶಶಿಕುಮಾರ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap