ಅಯೋಧ್ಯೆ ಸೀತಾಮಂದಿರದಲ್ಲಿ ನಮಾಜ್, ಇಫ್ತಾರ್ ಕೂಟ!!

ಅಯೋಧ್ಯೆ :

     ಅಯೋಧ್ಯೆಯ ಸೀತಾ ರಾಮ ದೇಗುಲವೊಂದರಲ್ಲಿ ರಂಜಾನ್ ತಿಂಗಳಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಅಷ್ಟೇ ಅಲ್ಲದೇ ನಮಾಜ್ ಕೂಡ ಪಠಣ ಮಾಡಲಾಗಿದೆ.

     ಅಯೋಧ್ಯೆ ಎಂದರೆ ಸದಾ ಧಾರ್ಮಿಕ ವೈಷಮ್ಯವೇ ನೆನಪಾಗಬಹುದು. ಆದರೆ ಅಲ್ಲಿಯ ಜನರ ಕೋಮು ಸೌಹಾರ್ದತೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಮತ್ತೀಗ ರಂಜಾನ್ ಮಾಸ ನಡೆ ಯುತ್ತಿದ್ದು, ಅಯೋಧ್ಯೆಯ ಜನರು ಸೌಹಾರ್ದತೆಗೆ ಹೊಸ ಭಾಷ್ಯ ಕಲ್ಪಿಸಿದ್ದಾರೆ.

      ರಾಮಲಲ್ಲಾನ ಜನ್ಮಸ್ಥಳದಲ್ಲಿರುವ ಸೀತಾರಾಮ ಮಂದಿರದಲ್ಲಿ ಸೀತಾ ರಾಮ ದೇವಾಲಯದಲ್ಲಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಮುಸ್ಲಿಂ ಸಮುದಾಯಕ್ಕೆ ಸಂಘಟಿತ ರೋಜಾ ಇಫ್ತಾರ್ ಆಯೋಜಿಸಲಾಗಿತ್ತು. ಅಷ್ಟೇ ಅಲ್ಲ ನಮಾಜ್ ಕೂಡ ಮಾಡಲಾಗುತ್ತದೆ. ಈ ರೋಜಾ ಇಫ್ತಾರ್ನಲ್ಲಿ ಮುಸ್ಲಿಂ ಸಮುದಾಯದ ಜನರನ್ನು ಹೊರತುಪಡಿಸಿ, ನಗರದ ಕೆಲವು ಸಾಧು-ಸಂತರು ಕೂಡ ಭಾಗಿಯಾಗಿದ್ದರು. 

      ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಅಯೋಧ್ಯೆ ವಿವಾದ ದಶಕಗಳಿಂದ ಬಗೆಹರಿಯದೆ ಉಳಿದಿದೆ. ಅದಾಗ್ಯೂ ಶ್ರೀರಾಮ ಹುಟ್ಟಿದ ನೆಲದಲ್ಲಿ ಅಂದರೆ ಅಯೋಧ್ಯಾದಲ್ಲಿ ಮತ್ತೊಮ್ಮೆ ಹಿಂದೂ-ಮುಸಲ್ಮಾನ್ ಸಹೋದರತ್ವ, ಏಕತೆಯನ್ನು ಬಿಂಬಿಸುವ ಸಾಮುದಾಯಿಕ ಸಾಮರಸ್ಯದ ಉದಾಹರಣೆ ಕಂಡುಬಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link