ನವದೆಹಲಿ:
ದೇಶದಲ್ಲಿ ದಿನೇದಿನೇ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು, ಗುರುವಾರ ಸಾರ್ವಕಾಲಿಕ ದಾಖಲೆಯ 95,735 ಸೋಂಕಿತರು ಪತ್ತೆಯಾಗಿದ್ದಾರೆ.
Single-day spike of 95,735 new #COVID19 cases & 1,172 deaths reported in India, in the last 24 hours.
The total case tally stands at 44,65,864 including 919018 active cases, 3471784 cured/discharged/migrated & 75062 deaths: Ministry of Health pic.twitter.com/eaRLQHDesZ
— ANI (@ANI) September 10, 2020
ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಕೇಸ್ಗಳು ಎಂಬಂತೆ ದೇಶದಲ್ಲಿ ಬರೋಬ್ಬರಿ 95,735 ಸೋಂಕಿತರು ಪತ್ತೆಯಾಗಿದ್ದು, 1,172 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 44,65,864 ಹಾಗೂ ಮೃತರ ಸಂಖ್ಯೆ 75,062ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 34,71,784 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 9,19,018 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ