ಆಸ್ತಿಗಾಗಿ ತಂದೆಯ ಮೇಲೆ ಖಾರದಪುಡಿ ಎರಚಿ ಹಲ್ಲೆ!!!

ಚಿತ್ತೂರು:

      ಆಸ್ತಿಗಾಗಿ ಮಗನೋರ್ವ ತನ್ನ ಪತ್ನಿ ಮತ್ತು ಸಹೋದರನೊಂದಿಗೆ ಸೇರಿ ತಂದೆಯ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ ಘಟನೆ ಮಂಗಳವಾರ ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆದಿದೆ.

      ತಿರುಪತಿಯ ಅನಂತ ಬೀದಿ ನಿವಾಸಿಯಾದ 85 ವರ್ಷ ವಯಸ್ಸಿನ ಮುನಿಕೃಷ್ಣಯ್ಯ ಹೆಚ್ಚಿನ ಸಾಲ ಮಾಡಿಕೊಂಡಿದ್ದರು. ಅದನ್ನು ತೀರಿಸಲು100 ಚದರ್​ ಅಡಿ ವಿಸ್ತೀರ್ಣದ ಜಾಗವನ್ನು ಮಾರಲು ನಿರ್ಧರಿಸಿದ್ದರು. ಆದರೆ 100 ಚದರ್​ ಅಡಿ ವಿಸ್ತೀರ್ಣದ ಜಾಗ ಅವರ ಮಗ ವಿಜಯ್ ಪತ್ನಿಯ ಹೆಸರಿನಲ್ಲಿತ್ತು. ವಿಚಾರ ತಿಳಿದ ನಂತರ ವಿಜಯ್ ಪತ್ನಿ ತನ್ನ ಹೆಸರಿನಲ್ಲಿರುವ ಜಾಗ ಮಾರಾಟಕ್ಕೆ ನಿರಾಕರಿಸಿದ್ದಾರೆ.

      ಈ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ವಾಗ್ವಾದ-ಗಲಾಟೆ ನಡೆದ ನಂತರ ವಯಸ್ಸಾದ ತಂದೆ-ತಾಯಿ ಅನ್ನೋದನ್ನು ಕೂಡ ನೋಡದೆ ವಿಜಯ್, ಅವನ ಪತ್ನಿ ಮತ್ತು ಸಹೋದರನ ಜೊತೆಗೂಡಿ ತನ್ನ ಪೋಷಕರ ಮೇಲೆ ಖಾರದ ಪುಡಿ ಎರಚಿ, ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

      ಈ ಘಟನೆಯಲ್ಲಿ ಮುನಿಕೃಷ್ಣಯ್ಯ ಗಂಭೀರವಾಗಿ ಗಾಯಗೊಂಡಿದ್ದು, ತನ್ನ ಮಗ ವಿಜಯ್ ತಮಗೆ ಸರಿಯಾಗಿ ಆಹಾರವನ್ನೂ ನೀಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.

     ವಿಜಯ್​​ನ ಈ ಪೈಶಾಚಿಕ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪತಿ- ಪತ್ನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link