ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ!!!

ಶ್ರೀಲಂಕಾ :

      ಶ್ರೀಲಂಕಾದಲ್ಲಿ ಬುರ್ಖಾವನ್ನು ಧರಿಸಲು ನಿಷೇಧ ಹೇರಿ ಅಧ್ಯಕ್ಷರ ಕಚೇರಿ ಆದೇಶ ಹೊರಡಿಸಿದೆ. 

      ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‍ ದಾಳಿಯಿಂದ ವಿದೇಶಿ ಪ್ರಜೆಗಳು ಸೇರಿದಂತೆ 250 ಕ್ಕೂ ಹೆಚ್ಚು ಮಂದಿ ಪ್ರಾಣಬಿಟ್ಟಿದ್ದಾರೆ. ಇದರಿಂದ ನಲುಗಿ ಹೋಗಿರುವ ಶ್ರೀಲಂಕಾ ಇದೀಗ ಭದ್ರತೆಯ ದೃಷ್ಟಿಯಿಂದ ಬುರ್ಖಾ ಧರಿಸಲು ನಿಷೇಧ ಹೇರಿದೆ.

      ಬುರ್ಖಾದಿಂದ ಮುಖ ಮುಚ್ಚಿಕೊಂಡಿದ್ದ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳನ್ನು ವಿಶೇಷ ಕಾರ್ಯಾಚರಣಾ ಪಡೆ (ಎಸ್‌ಟಿಎಫ್‌) ಬಂಧಿಸಿದಾಗ ಸ್ವಯಂ ಸ್ಫೋಟಿಸಿಕೊಂಡ ಹಿನ್ನೆಲೆಯಲ್ಲಿ, ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಯಾವೊಂದು ಅವಕಾಶವೂ ಸಿಗದಂತೆ ಮಾಡಲು ದೇಶಾದ್ಯಂತ ಬುರ್ಖಾ ನಿಷೇಧಿಸಲಾಗಿದೆ. 

      ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಬುರ್ಖಾ ಮೂಲಭೂತವಾದದ ಸಂಕೇತವಾಗಿದ್ದು, ಇದರಿಂದ ಭದ್ರತೆಗೆ ತೊಡಕಾಗುತ್ತಿದೆ. ತುರ್ತು ಪರಿಸ್ಥಿತಿಯ ನಿಯಮಗಳ ಅನುಸಾರ ಸಾರ್ವಜನಿಕ ಸುರಕ್ಷತೆಗಾಗಿ ಈ ಆದೇಶ ಹೊರಡಿಸಲಾಗಿದ್ದು ಸೋಮವಾರದಿಂದಲೇ ಜಾರಿಗೆ ಬಂದಿದೆ ಎಂದಿದ್ದಾರೆ.

      ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‍ ದಾಳಿಯ ಒಂದು ವಾರದ ಬಳಿಕ ದೇಶದಲ್ಲಿ ಬುರ್ಖಾ ಸಹಿತ ಮುಖ ಮುಚ್ಚಿಕೊಳ್ಳುವ ಉಡುಪುಗಳನ್ನು ನಿಷೇಧಿಸಿ ಇದೀಗ ಭಾರಿ ಕಟ್ಟುನಿಟ್ಟಿನ ಕ್ರಮಯೊಂದನ್ನು ಕೈಗೊಳ್ಳಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link