ನವದೆಹಲಿ:
ಕೇಂದ್ರ ಸರ್ಕಾರ ಆರ್ಬಿಐನಿಂದ 1.76 ಲಕ್ಷ ಕೋಟಿ ರೂ. ಹೆಚ್ಚುವರಿ ಹಣವನ್ನು ಪಡೆದುಕೊಂಡಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಸಂಕಷ್ಟದಲ್ಲಿರುವ ಆರ್ಥಿಕತೆಯನ್ನು ಹೇಗೆ ಸರಿ ಮಾಡಬೇಕೆಂದು ತಿಳಿಯದೆ ಇದೀಗ ಆರ್ಬಿಐನಿಂದ ಹೆಚ್ಚುವರಿ ಹಣವನ್ನು ಸರ್ಕಾರ ಲೂಟಿ ಮಾಡಿದೆ ಎಂದು ಅವರು ಸರ್ಕಾರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸರ್ಕಾರದ ಕ್ರಮ ಹೇಗಿದೆ ಎಂದರೆ ಆಸ್ಪತ್ರೆಯಿಂದ ಬ್ಯಾಂಡ್-ಏಡ್ ಕಳವು ಮಾಡಿ ಗುಂಡೇಟಿನಿಂದ ಆದ ಗಾಯಕ್ಕೆ ಕಟ್ಟಿದಂತಾಗಿದೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
PM & FM are clueless about how to solve their self created economic disaster.
Stealing from RBI won’t work – it’s like stealing a Band-Aid from the dispensary & sticking it on a gunshot wound. #RBILooted https://t.co/P7vEzWvTY3
— Rahul Gandhi (@RahulGandhi) August 27, 2019
ದೇಶದ ಎಲ್ಲಾ ವಲಯಗಳಲ್ಲಿ ಭಾರಿ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆರ್ಬಿಐನಿಂದ ಭಾರಿ ದೊಡ್ಡ ಮೊತ್ತದ ಹಣ ಪಡೆದಿದೆ. ಈ ರೀತಿಯಾಗಿ ಆರ್ ಬಿಐ ಗೆ ಶೋಷಣೆ ಮಾಡಿದರೆ ಆರ್ಥಿಕತೆ ಖಂಡಿತ ಹೆಚ್ಚುವುದಿಲ್ಲ. ಬದಲಾಗಿ ಮತ್ತಷ್ಟು ಹಿನ್ನಡೆ ಸಾಧಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ