ನೀಟ್ ಫಲಿತಾಂಶದ ಯಡವಟ್ಟು ; ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!!

ಭೋಪಾಲ್ : 

     ಬಹು ನಿರೀಕ್ಷೆಯೊಂದಿಗೆ ಬರೆದಿದ್ದ ನೀಟ್ ಪರೀಕ್ಷೆಯ ಫಲಿತಾಂಶ ಯಡವಟ್ಟಿನಿಂದಾಗಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ದುರಂತ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

     ಮಧ್ಯಪ್ರದೇಶದ ವಿಧಿ ಸೂರ್ಯವಂಶಿ ಎಂಬ ವಿದ್ಯಾರ್ಥಿನಿ ತಾನು ಮುಂದೆ ವೈದ್ಯಳಾಗಬೇಕೆಂಬ ಕನಸು ಕಂಡಿದ್ದಳು. ಆದರೆ ನೀಟ್ ಫಲಿತಾಂಶವನ್ನು ಪಟ್ಟಿಯಲ್ಲಿ ಪರೀಕ್ಷಿಸಿದಾಗ ತನ್ನ ಹೆಸರಿನ ಮುಂದೆ ಕೇವಲ 6 ಸಂಖ್ಯೆಗಳ ಫಲಿತಾಂಶ ಮಾತ್ರ ಇದ್ದಿರುವುದು ಕಂಡುಬಂದಿದೆ ಎನ್ನಲಾಗಿದೆ.

      ವಿಧಿ ನೀಟ್ ಪರೀಕ್ಷೆಯಲ್ಲಿ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಅಂಕ ಪಡೆದಿದ್ದಾಳೆ ಎಂಬುದನ್ನು ಪೋಷಕರು ಸಹಾ ನಂಬಲಿಲ್ಲ. ಮಾನಸಿಕ ಆಘಾತಕ್ಕೊಳಗಾಗಿದ್ದ ವಿಧಿ ತಪ್ಪು ನಿರ್ಧಾರ ಕೈಗೊಂಡು ತನ್ನ ಕೋಣೆಯಲ್ಲಿರುವ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. 

      ಏತನ್ಮಧ್ಯೆ ವಿಧಿ ಸೂರ್ಯವಂಶಿ ನೀಟ್ ಪರೀಕ್ಷೆಯ ಒಎಂಆರ್ ಶೀಟ್ (ಉತ್ತರಪತ್ರಿಕೆಯ ಪ್ರತಿ)ಅನ್ನು ಪರಿಶೀಲಿಸಿದಾಗ ಆಕೆ ನಿಜಕ್ಕೂ ಅತ್ಯುತ್ತಮ ಅಂಕ(590)ಪಡೆದಿದ್ದಳು. ಆದರೆ ವಿದ್ಯಾರ್ಥಿನಿ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap