ನಿರ್ದೇಶಕರ ಸಂಘದ ಹೊಸ ಕಛೇರಿಯ ಉದ್ಘಾಟನೆಗೆ ಆಗಮಿಸಿದ ಸ್ಟಾರ್ ನಟರು!!

  ಬೆಂಗಳೂರು :

    ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಹೊಸ ಕಛೇರಿಯನ್ನು ಇದು ಉದ್ಘಾಟನೆ ಮಾಡಲಾಯಿತು. ನಟ ಉಪೇಂದ್ರ, ಸುದೀಪ್, ರಮೇಶ್ ಅರವಿಂದ್ ಸೇರಿದಂತೆ ಅನೇಕ ನಟ ಹಾಗೂ ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಾಗರಭಾವಿಯ 2ನೇ ಹಂತದ 11ನೇ ಬ್ಲಾಕ್ ನಲ್ಲಿ ನಿರ್ದೇಶಕರ ನೂತನ ಕಚೇರಿಯನ್ನು ಉದ್ಘಾಟನೆ ಮಾಡಲಾಗಿದೆ. ಜೊತೆಗೆ ಸಂಘದ ವತಿಯಿಂದ ಕ್ಯಾಲೆಂಡರ್ ಹಾಗೂ ಡೈರಿಯನ್ನು ಸಹ ಬಿಡುಗಡೆ ಮಾಡಲಾಯಿತು.

  ಸಂಘದ ಅಧ್ಯಕ್ಷ ವಿ ನಾಗೇಂದ್ರ ಪ್ರಸಾದ್, ಉಪಾಧ್ಯಕ್ಷ ಸಾಧು ಕೋಕಿಲ, ನಿರ್ದೇಶಕ ಭಗವಾನ್, ರಾಜೇಂದ್ರ ಸಿಂಗ್ ಬಾಬು, ಗಿರೀಶ್ ಕಾಸರವಳ್ಳಿ, ನಿರ್ದೇಶಕಿ ರೂಪ ಐಯ್ಯರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು

   ಇನ್ನೂ ಈ ಕಾರ್ಯಕ್ರಮಕಮಕ್ಕೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದೆ ತಡವಾಗಿ ಬಂದು ಸಾರಿ ಎಂದು ಸುದೀಪ್ ಕ್ಷಮೆ ಕೇಳಿದರು. ನಿರ್ದೇಶಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಲು ಸಿದ್ಧ. ಯಾವುದೇ ಸಿನಿಮಾ ಗೆದ್ದಾಗಲೂ ಕ್ರೆಡಿಟ್ ಸಿಗಬೇಕಾಗಿದ್ದು ನಿರ್ದೇಶಕರಿಗೆ ಆದರೆ ನಿರ್ದೇಶಕರಿಗೆ ಆ ಕ್ರೆಡಿಟ್ ಸಿಗೋದಿಲ್ಲ. ನನಗೂ ನಿರ್ದೇಶಕರ ಸಂಘದ ಕಾರ್ಡ್ ಇದೆ. ಅದು ನನಗೆ ಹೆಮ್ಮೆ ಇದೆ ಎಂದು ಹೇಳಿದರು.

  ಇನ್ನೂ ಕಾರ್ಯಕ್ರಮದಲ್ಲಿ ಹಾರ, ಸನ್ಮಾನ ಹಾಕಿಸಿಕೊಳ್ಳೋದನ್ನು ಸುದೀಪ್ ನಿರಾಕರಿಸಿದ್ರು. ಈ ಸನ್ಮಾನ ನನಗಿಂತ ಹಿರಿಯರಿಗೆ ಸಲ್ಲಬೇಕು ಎಂದು ಹೇಳಿದರು.

ಐಟಿ ರೈಡ್ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್ ಯಾರೂ ಟಾರ್ಗೆಟ್ ಮಾಡಿಲ್ಲ. ಅವರು ಮಾಡಿರೋದನ್ನು ಅಪ್ರಿಷಿಯೇಟ್ ಮಾಡಬೇಕು. ಅವರು ಬಂದಿದ್ದಾರೆ ಅಂದ್ರೆ ಏನೋ ಕಾರಣ ಇರುತ್ತೆ. ಊಹಾ-ಪೋಹಗಳು ಹೆಚ್ಚಾಗಿವೆ. ನನಗಿದು ಮೊದಲು, ನಾವು ಸರಿಯಾಗಿದ್ರೆ ಭಯ ಪಡೋ ಅವಶ್ಯಕತೆಯೇ ಇಲ್ಲ ಎಂದು ಸುದೀಪ್ ಹೇಳಿದ್ರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link