ವಿಷ ಪ್ರಸಾದ ದುರಂತಕ್ಕೆ ನಾನೇ ಕಾರಣ…!!

ಚಾಮರಾಜನಗರ :

ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿ 15 ಮಂದಿಯನ್ನು ಬಲಿತೆಗೆದುಕೊಂಡ ವಿಷ ಪ್ರಸಾದ ದುರಂತಕ್ಕೆ ನಾನೇ ಕಾರಣ ಎಂದು ಅಂಬಿಕಾ ಎಂಬ ಮಹಿಳೆ ತಪ್ಪೊಪ್ಪಿಕೂಂಡಿದ್ದಾರೆ  .

 ವಿಷ ಪ್ರಸಾದವನ್ನು ಉಣಿಸಲು ಅಂಬಿಕಾ ಮುಂದಾಗಿದ್ದಾದರೂ ಏಕೆ ?

     ಸಾಲೂರು ಮಠದ ಕಿರಿಯ ಸ್ವಾಮೀಜಿ, ಟ್ರಸ್ಟ್‌ನ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಸೂಚನೆಯಂತೆ ತಾನೇ ಪ್ರಸಾದಕ್ಕೆ ವಿಷ ಬೆರೆಸಿದ್ದಾಗಿ  ಅಂಬಿಕಾ ಪೊಲೀಸರ ಎದುರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು  ತಿಳಿಸಿದುಬಂದಿದೆ

ವಿಷ ಪ್ರಸಾದ ಪ್ರಕರಣ :

ಮೃತರ ಸಂಖ್ಯೆ 14, ನಾಲ್ವರು ಶಂಕಿತರು ವಶಕ್ಕೆ ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ತನಿಖೆ ನಡೆದಿದೆ.

  ಟ್ರಸ್ಟ್ ಅಧ್ಯಕ್ಷ ಮಹದೇವ ಸ್ವಾಮಿ, ಮಠದ ವ್ಯವಸ್ಥಾಪಕ ಮಾದೇಶ ಮತ್ತು ಆತನ ಪತ್ನಿ ಅಂಬಿಕಾ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡಿನವರಾದ ಅಂಬಿಕಾ ಮಾದೇಶ್ ಅವರನ್ನು ಮದುವೆಯಾದ ಬಳಿಕ ಗ್ರಾಮದಲ್ಲಿ ನೆಲೆಸಿದ್ದರು. ಮಠ ಮತ್ತು ದೇವಸ್ಥಾನದ ಹಿಡಿತವನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳುವ ಉದ್ದೇಶ ಹೊಂದಿದ್ದರು. ಟ್ರಸ್ಟ್‌ನ ಪೂಜಾರಿ ಚಿನ್ನಪ್ಪಿ ಅವರನ್ನು ಬೆದರಿಸುವುದು ಅವರ ಗುರಿಯಾಗಿತ್ತು. ಈ ಕಾರಣಗಳಿಂದ ಆಹಾರಕ್ಕೆ ವಿಷ ಬೆರೆಸಿದ್ದರು ಎನ್ನಲಾಗಿದೆ. 

      ಗುರುಸ್ವಾಮಿ ಅವರು ಮಹದೇವಸ್ವಾಮಿ ಜೊತೆ ಮಾತುಕತೆ ನಡೆಸುತ್ತಿರಲಿಲ್ಲ. ಹಾಗೆಯೇ ಮಠದ ಸಂಪೂರ್ಣ ಅಧಿಕಾರವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವುದು ಮಹದೇವಸ್ವಾಮಿ ಮತ್ತು ಮಾದೇಶ್ ಉದ್ದೇಶವಾಗಿತ್ತು. ಇವೆಲ್ಲ ಸಂಗತಿಗಳೂ ಈ ಮಹಾ ದುರಂತಕ್ಕೆ ಕಾರಣವಾಗಿದೆ. 

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap