
ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ನಿಂದ ‘ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಕೆಲಸವನ್ನು ಕೇಂದ್ರ ಸರಕಾರಕ್ಕೆ ನೀಡಿದೆ.
ಇಡೀ ದೇಶದ ಜನತೆ ಕುತೂಹಲದಿಂದ ವೀಕ್ಷಿಸುತ್ತಿರುವ ಐತಿಹಾಸಿಕ ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಪ್ರಕರಣದ ಅಂತಿಮ ತೀರ್ಪು ಇಂದು ಸುಪ್ರೀಂ ಕೋರ್ಟ್ ನಲ್ಲಿ ಪ್ರಕಟವಾಗಿದ್ದು, ಹಿಂದೂಗಳಿಗೆ ಅಯೋಧ್ಯೆಯಲ್ಲಿ ಷರತ್ತುಬದ್ಧ ಜಾಗ ನೀಡಿದೆ. 3 ತಿಂಗಳಲ್ಲಿ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣದ ಯೋಜನೆ ತಯಾರಿಸಲು ಕೋರ್ಟ್ ಸೂಚನೆ ನೀಡಿದೆ.

ಅಲ್ಲದೇ ಮುಸ್ಲಿಮರಿಗೆ ಮಸೀದಿ ಕಟ್ಟಲು ಸುನ್ನಿ ಬೋರ್ಡ್ ಗೆ 4-5 ಎಕರೆ ಪರ್ಯಾಯ ಭೂಮಿ ನೀಡಲು ಕೋರ್ಟ್ ಸೂಚನೆ ನೀಡಿದ್ದು, ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಪರ್ಯಾಯ ಜಾಗ ನೀಡಿದೆ. ಮಸೀದಿ ನಿರ್ಮಾಣ ಸುನ್ನಿ ಬೋರ್ಡ್ ವಿವೇಚನೆಗೆ ಬಿಟ್ಟಿದ್ದು. ಪರ್ಯಾಯ ಜಾಗವನ್ನು ಇತರೆ ಅವಶ್ಯಕತೆಗೂ ಬಳಸಬಹುದು ಎಂದೂ ತಿಳಿಸಿದೆ.
ಪುರಾತತ್ವ ಇಲಾಖೆಯ ವರದಿ ಪ್ರಕಾರ, ವಿವಾದಿತ ಜಾಗದಲ್ಲಿ ಹಿಂದೂಗಳಿಂದ ಪೂಜೆಯೂ ನಡೀತಿತ್ತು. ಮುಸ್ಲೀಮರು ಅವಕಾಶ ಇಲ್ಲದಿದ್ದರೂ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದು ಸೌಹಾರ್ದತೆಯಿಂದ ಆಗುತ್ತಿತ್ತು ಅನ್ನೋದು ಇದೆ. ದೇವಾಲಯವಿದ್ದ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲಾಗಿದೆ, ಮಸೀದಿ ಇದ್ದ ಜಾಗದಲ್ಲಿ ಇಸ್ಲಾಂನ ಮೂಲದ ಕಟ್ಟಡವಿಲ್ಲ. ಭೂಮಿಯ ಹಕ್ಕು ಕಾನೂನಿನ ಪ್ರಕಾರ ನಿರ್ಧಾರವಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಶರದ್ ಬೊಬ್ಡೆ, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು, ಶನಿವಾರ(ನವೆಂಬರ್ 09)ದಂದು ನ್ಯಾಯಾಲಯಕ್ಕೆ ರಜೆ ಇದ್ದರೂ ಕಾರ್ಯ ನಿರ್ವಹಿಸಿ, ಈ ಐತಿಹಾಸಿಕ ತೀರ್ಪು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
