ದೆಹಲಿ:
ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಯುದ್ಧ ವಿಮಾನಗಳ ಬೆಲೆ ಮತ್ತು ತಾಂತ್ರಿಕ ವಿವರಗಳನ್ನು ಹತ್ತು ದಿನಗಳ ಒಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಕಳೆದ ಬಾರಿಯ ವಿಚಾರಣೆ ಸಂದರ್ಭ ತಾಂತ್ರಿಕ ಹಾಗೂ ಬೆಲೆಯ ವಿವರ ಬಿಟ್ಟು ಉಳಿದ ಪ್ರಕ್ರಿಯೆ ವಿವರ ನೀಡುವಂತೆ ಹೇಳಿತ್ತು. ನ್ಯಾಯಾಲಯವು ರಫೇಲ್ ಖರೀದಿ ನಿರ್ಧಾರಕ್ಕೆ ಬರಲು ಕಾರಣವಾದ ಅಂಶಗಳನ್ನು ತಿಳಿಸುವಂತೆ ಸೂಚಿಸಿತ್ತು. ವಿಮಾನ ಖರೀದಿ ಒಪ್ಪಂದದ ಹಣಕಾಸು ವಿವರಗಳ ಬಗ್ಗೆ ಸಮಜಾಯಿಷಿ ಕೇಳುವುದಿಲ್ಲ ಎಂದು ಹೇಳಿತ್ತು.
ಆದರೆ ಇಂದಿನ ವಿಚಾರಣೆ ಸಂದರ್ಭ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ‘ವಿಮಾನಕ್ಕೆ ನಿಗದಿಪಡಿಸಿದ ಮೌಲ್ಯದ ಬಗ್ಗೆ ತಿಳಿದುಕೊಳ್ಳುವ ಅಪೇಕ್ಷೆ ನಮಗಿದೆ. 10 ದಿನಗಳ ಒಳಗೆ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡಿ’ ಎಂದು ಸೂಚಿಸಿದರು.
ಒಪ್ಪಂದದ ಕೆಲವು ವಿವರಗಳನ್ನು ಸಹ ಸಾರ್ವಜನಿಕ ವೆಬ್‌ಸೈಟ್‌ಗಳಲ್ಲಿ ಬಹಿರಂಗಪಡಿಸುವಂತೆ ಕೂಡ ಅದು ನಿರ್ದೇಶಿಸಿದೆ. ಅಲ್ಲದೆ, ಯುದ್ಧ ವಿಮಾನ ತಯಾರಿಕಾ ಕಂಪೆನಿಯು ತನ್ನ ಆಫ್‌ಸೆಟ್ ಪಾಲುದಾರರೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ವಿವರಗಳನ್ನು ಒಪ್ಪಂದದ ವಿರುದ್ಧ ಅರ್ಜಿ ಸಲ್ಲಿಸಿರುವ ವ್ಯಕ್ತಿಗಳಿಗೆ ಒದಗಿಸುವಂತೆ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ