ನವದೆಹಲಿ:
ಏಮ್ಸ್ ಐಎನ್‌ಐ-ಸಿಇಟಿ 2021ರ ಪರೀಕ್ಷೆಗಳನ್ನ ಕನಿಷ್ಠ ಒಂದು ತಿಂಗಳು ಮುಂದೂಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.
‘ಕೋವಿಡ್19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜೂನ್ 16 ರಂದು ನಿಗದಿಯಾಗಿರುವ ಎಲ್ಲಾ ಏಮ್ಸ್, ಜಿಪ್ಮರ್, ಪಿಜಿಐಎಂಇಆರ್ ಮತ್ತು ನಿಮ್ಹಾನ್ಸ್ʼನಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ʼಗಳ ಪ್ರವೇಶಕ್ಕಾಗಿ ಐಎನ್‌ಐ-ಸಿಇಟಿ 2021 ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ’ ಎನ್ನಲಾಗಿದೆ.
‘ಪರೀಕ್ಷೆಯನ್ನ ಒಂದು ತಿಂಗಳು ಮುಂದೂಡುವಂತೆ ನಾವು ನಿರ್ದೇಶಿಸುತ್ತೇವೆ. ಒಂದು ತಿಂಗಳ ಅವಧಿ ಮುಗಿದ ನಂತರ ಯಾವ ಸಮಯದಲ್ಲಿ ಪರೀಕ್ಷೆ ನಡೆಸಬಹುದು ಎಂದು ಹೇಳಬೇಕಾಗಿಲ್ಲ’ ಎಂದು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಹೇಳಿದರು.
2021ರ ಜೂನ್ 16ರಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಡೆಸಲು ಉದ್ದೇಶಿಸಿದ್ದ ಐಎನ್ ಐ ಸಿಇಟಿ ಪರೀಕ್ಷೆ 2021ನ್ನು ಮುಂದೂಡುವಂತೆ ಕೋರಿ ವೈದ್ಯ ಸಂಘಗಳು ಸಲ್ಲಿಸಿದ್ದ ಹಲವಾರು ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ