ಪಿಎಂಸಿ ಬ್ಯಾಂಕ್ ಹಗರಣ : ಆರೋಪಿಗಳ ಸ್ಥಳಾಂತರಕ್ಕೆ ಸುಪ್ರೀಂ ತಡೆ!!

ನವದೆಹಲಿ :

    ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಎಚ್.ಡಿ.ಐಎಲ್ ನಿರ್ದೇಶಕರಗಳನ್ನು ಜೈಲಿನಿಂದ ಸ್ಥಳಾಂತರಕ್ಕೆ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಇಂದು ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

       ಇಂದು ಬಾಂಬೆ ಹೈಕೋರ್ಟ್​​ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಜೈಲಿನಿಂದ ಆರೋಪಿಗಳ ಸ್ಥಳಾಂತರಕ್ಕೆ ತಡೆಯಾಜ್ಞೆ ನೀಡಿದೆ.

      ಇತ್ತೀಚೆಗೆ ಪಿಎಂಸಿ ಬ್ಯಾಂಕ್ ಹಗರಣ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಎಚ್​​ಡಿಐಎಲ್​​ ನಿರ್ದೇಶಕರಾದ ಸರಾಂಗ್​​ ಮತ್ತು ರಾಕೇಶ್ ವಾಧವನ್​​ರನ್ನು ಜೈಲಿನಿಂದ ಮನೆಗೆ ಸ್ಥಳಾಂತರಿಸುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್​​ ಮೊರೆ ಹೋಗಿದ್ದರು. ಪಿಎಂಸಿ ಬ್ಯಾಂಕ್​​ ಹಗರಣ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್​ ಅಸಾಮಾನ್ಯ ಆದೇಶ ನೀಡಿದೆ. ಅಪ್ಪ ಮತ್ತು ಮಗ ಪೊಲೀಸರ ವಶದಲ್ಲಿದ್ದಾರೆ.

      ಈಗ ಬಾಂಬೆ ಹೈಕೋರ್ಟ್​ ಆದೇಶದಂತೆ ಇಬ್ಬರನ್ನೂ ಸ್ಥಳಾಂತರ ಮಾಡಿದರೆ ಜಾಮೀನು ನೀಡಿದಂತಾಗುತ್ತದೆ ಎಂದು ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಹಾಗಾಗಿಯೇ ಸುಪ್ರೀಂಕೋರ್ಟ್​​ ಬಾಂಬೆ ಹೈಕೋರ್ಟ್​ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap