’30 ನಿಮಿಷದಲ್ಲಿ ಬಹುಮತ ಸಾಬೀತು ಮಾಡ್ತೀವಿ – ಸಂಜಯ್ ರಾವತ್

ದೆಹಲಿ :

      ಮಹಾರಾಷ್ಟ್ರ ಸರ್ಕಾರ ರಚನೆಯ ಬಗ್ಗೆ ಸುಪ್ರೀಂಕೋರ್ಟ್​ ತೀರ್ಪನ್ನು ಶಿವಸೇನೆ ನಾಯಕ ಹಾಗೂ ಸಂಸದ ಸಂಜಯ್ ರಾವುತ್ ಸ್ವಾಗತಿಸಿದ್ದು, 30 ನಿಮಿಷದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ” ಎಂದಿದ್ದಾರೆ.

      ಮಹಾರಾಷ್ಟ್ರ ಸರ್ಕಾರದ ಭವಿಷ್ಯ ನಿರ್ಧರಿಸುವ ಮಹತ್ವದ ತೀರ್ಪನ್ನುಸುಪ್ರೀಂ ಕೋರ್ಟ್​ ನೀಡಿದ್ದು , ನಾಳೆ ಸಂಜೆ 5 ಗಂಟೆ ಒಳಗೆ ಬಹುಮತ ಸಾಬೀತು ಮಾಡುವಂತೆ ಸಿಎಂ ಫಡ್ನವೀಸ್​​ಗೆ ಸುಪ್ರೀಂಕೋರ್ಟ್​ ಸೂಚಿಸಿದೆ.

      ಸುಪ್ರೀಂ ಕೋರ್ಟ್ ತೀರ್ಪನ್ನು ವಿಪಕ್ಷ ನಾಯಕರು ಸ್ವಾಗತಿಸಿದ್ದು, ನಾವು ಖಂಡಿತವಾಗಿಯೂ ಬಹುಮತ ಸಾಭೀತು ಪಡಿಸಿ ಬಿಜೆಪಿ ಎದುರು ಗೆಲ್ಲುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ರಚನೆಯ ಬಗ್ಗೆ ಸುಪ್ರೀಂಕೋರ್ಟ್​ ತೀರ್ಪನ್ನು ಶಿವಸೇನೆ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಸ್ವಾಗತಿಸಿದ್ದಾರೆ. ‘ಸತ್ಯ ಗೆದ್ದಿದೆ. ಕೋರ್ಟ್​ ವಿಶ್ವಾಸಮತ ಯಾಚನೆಗೆ 30 ಗಂಟೆ ಕಾಲಾವಕಾಶ ನೀಡಿದೆ, ಆದರೆ ನಮ್ಮ ಬಹುಮತವನ್ನು ಕೇವಲ 30 ನಿಮಿಷದಲ್ಲಿ ಸಾಬೀತುಪಡಿಸುತ್ತೇವೆ’ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap