ಸಚಿನ್ ಮುಡಿಗೆ ‘ಹಾಲ್‌ ಆಫ್‌ ಫೇಮ್‌ ‘ ಗರಿ!!

ಮುಂಬೈ:

     ಅಂತಾರಾಷ್ಟ್ರೀಯ ಕ್ರಿಕೆಟ್​​ ಸಮಿತಿ (ಐಸಿಸಿ) ನೀಡುವ ಪ್ರತಿಷ್ಠಿತ ಹಾಲ್​​ ಆಫ್​​ ಫೇಮ್​​​​​​​ ಗೌರವವನ್ನು ಭಾರತ ಕ್ರಿಕೆಟ್​ ದಿಗ್ಗಜ ಸಚಿನ್​​ ತೆಂಡೂಲ್ಕರ್ ಗೆ ನೀಡಲಾಗಿದೆ.

      ವಿಶ್ವ ಕ್ರಿಕೆಟ್‌ ನ ದಂತಕಥೆ, ಭಾರತದ 46 ವರ್ಷದ ಮಾಜಿ ಆಟಗಾರ ಸಚಿನ್‌ ತೆಂಡುಲ್ಕರ್‌ ಈ ಅತ್ಯನ್ನತ ಗೌರವ ಪಡೆದ ಆರನೇ ಭಾರತೀಯ. ಸಚಿನ್‌ ತೆಂಡುಲ್ಕರ್‌ ಜೊತೆಗೆ ದಕ್ಷಿಣ ಆಫ್ರಿಕ ಮಾಜಿ ಆಟಗಾರ ಅಲನ್‌ ಡೊನಾಲ್ಡ್‌ ಮತ್ತು ಮಾಜಿ ಆಸೀಸ್‌ ಆಟಗಾರ ಕ್ಯಾಥ್ರಿನ್‌ ಫಿಜ್‌ ಪ್ಯಾಟ್ರಿಕ್‌ ಅವರಿಗೆ ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವ ನೀಡಲಾಗಿದೆ.

Image result for sachin tendulkar hall of fame

      ಈ ಮೊದಲು ಸುನೀಲ್‌ ಗಾವಸ್ಕರ್‌, ಬಿಷನ್‌ ಸಿಂಗ್‌ ಬೇಡಿ, ಕಪಿಲ್‌ ದೇವ್‌, ಅನಿಲ್‌ ಕುಂಬ್ಳೆ, ಮತ್ತು ರಾಹುಲ್‌ ದ್ರಾವಿಡ್‌ ಈ ಗೌರವಕ್ಕೆ ಪಾತ್ರರಾಗಿದ್ದರು.

      ‘ಈ ಸಂದರ್ಭದಲ್ಲಿ ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಪಾಲಕರು, ಸಹೋದರ ಅಜಿತ್‌, ಪತ್ನಿ ಅಂಜಲಿ ನನ್ನ ಬದುಕಿನ ಆಧಾರ ಸ್ಥಂಭಗಳು. ರಮಾಕಾಂತ್‌ ಅಚ್ರೇಕರ್‌ ರಂತಹ ಕ್ರಿಕೆಟ್‌ ಕೋಚ್‌ ರನ್ನು ಪಡೆದಿದ್ದು ನನ್ನ ಅದೃಷ್ಟ’ ಎಂದು ಸಚಿನ್‌ ಹೇಳಿಕೆ ನೀಡಿದ್ದಾರೆ.

      ಸಚಿನ್​​ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 200 ಟೆಸ್ಟ್​ಗಳಲ್ಲಿ 51 ಶತಕ ಹಾಗೂ 68 ಅರ್ಧ ಶತಕಳೊಂದಿಗೆ 15,921 ರನ್​​​​​ಗಳನ್ನು ಗಳಿಸಿದ್ದರೆ, 463 ಏಕದಿನ ಪಂದ್ಯಗಳಲ್ಲಿ 49 ಶತಕ ಹಾಗೂ 96 ಅರ್ಧ ಶತಗಳೊಂದಿಗೆ 18,426 ರನ್​​ ಗಳನ್ನು ಸಿಡಿಸುವ ಮೂಲಕ ದಾಖಲೆ ಸೃಷ್ಟಿಸಿದ್ದರು. ಈ ಎಲ್ಲ ಸಾಧನೆಯನ್ನು ಗುರುತಿಸಿ ಐಸಿಸಿ ಅವರನ್ನು ಗೌರವಿಸಿದೆ. ಅವರು 2013ರಲ್ಲಿ ತಮ್ಮ ಕೊನೆಯ ಟೆಸ್ಟ್​​ ಪಂದ್ಯವನ್ನು ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ವಿದಾಯ ಹೇಳಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap