ಎನ್ ಕೌಂಟರ್ : ಓರ್ವ ಉಗ್ರನ ಹತ್ಯೆ!!!

ದೆಹಲಿ:

      ಶೋಪಿಯಾನ್‌ನಲ್ಲಿ ಶುಕ್ರವಾರ ನಸುಕಿನ ವೇಳೆ ಸೇನಾಪಡೆಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಭಯೋತ್ಪಾದಕನೊಬ್ಬನನ್ನು ಹತ್ಯೆಗೈದಿವೆ.

      ಶುಕ್ರವಾರ ಬೆಳಿಗ್ಗೆ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಆರಂಭವಾಗಿತ್ತು. ಉಗ್ರನೊಬ್ಬ ಝಾನ್‌ಪೋರಾ ಪ್ರದೇಶದಲ್ಲಿ ಬುಧವಾರ ಇಬ್ಬರು ಪಿಡಿಪಿ ಕಾರ್ಯಕರ್ತರನ್ನು ಅಪಹರಿಸಿ ಗುಂಡಿಕ್ಕಿ ಗಾಯಗೊಳಿಸಿದ ಬಳಿಕ ಈ ಕಾರ್ಯಾಚರಣೆ ನಡೆಸಲಾಗಿದೆ.

       ಪುಲ್ವಾಮಾ ಉಗ್ರ ದಾಳಿಯಲ್ಲಿ ಸಿಆರ್‌ಪಿಎಫ್ನ 40 ಯೋಧರನ್ನು ಹತ್ಯೆಗೈದ ಬಳಿಕ ನಡೆಸಿದ ಕಾರ್ಯಾಚರಣೆಗಳಲ್ಲಿ ಇದುವರೆಗೆ ಒಟ್ಟು 41 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಲೆಫ್ಟಿನೆಂಟ್‌ ಜನರಲ್‌ ಕೆ.ಜೆ.ಎಸ್‌.ಧಿಲ್ಲೊನ್‌ ವಿವರಗಳನ್ನು ನೀಡಿದ್ದಾರೆ.

       ಹತ್ಯೆಗೀಡಾ 41 ಉಗ್ರರ ಪೈಕಿ 25 ಮಂದಿ ಜೈಶ್‌ ಇ ಮೊಹಮದ್‌ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, ಅದರಲ್ಲಿ 13 ಮಂದಿ ಪಾಕ್‌ ಉಗ್ರರು ಎಂದು ತಿಳಿಸಿದ್ದಾರೆ. 

       ಜಮ್ಮು-ಕಾಶ್ಮೀರದಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಕಾರ್ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಆರು ಜನ ಉಗ್ರರನ್ನು ಏಪ್ರಿಲ್ 29 ರಂದು ಪೊಲೀಸರು ಬಂಧಿಸಿದ್ದರು. ಈ ಉಗ್ರರ ಮೂಲಕ ಕಾಶ್ಮೀರದಲ್ಲಿರುವ ಉಗ್ರರ ಕುರಿತು ಮತ್ತು ಅವರ ಮುಂದಿನ ಯೋಜನೆಗಳ ಕುರಿತು ಮಾಹಿತಿ ಲಭ್ಯವಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap