ಹೋಲಿ : ಕಾಮಣ್ಣನ ಬದಲು ಉಗ್ರ ಮಸೂದ್ ಪ್ರತಿಮೆ ದಹನ!!

ಮುಂಬೈ:

      ಮುಂಬೈನ ವರ್ಲಿಯಲ್ಲಿ ಈ ಬಾರಿಪುಲ್ವಾಮಾ ದಾಳಿಯ ಮಾಸ್ಟರ್​ ಮೈಂಡ್​, ಜೈಷೆ ಮೊಹಮ್ಮದ್​ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ನ ಪ್ರತಿಕೃತಿಯನ್ನು ದಹನ ಮಾಡಿ ಹೋಳಿ ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ.

          ಮುಂಬೈನ ಸಿನಿಯಾ ಕೊಲಿವಾಡಾ ಪ್ರದೇಶದ ಇಬ್ಬರು ಸಹೋದರರು, ಮಸೂದ್​ ಅಜರ್​ ಹಾಗೂ ಯುವ ಸಮೂಹಕ್ಕೆ ಮೊಬೈಲ್​ ಗೇಮ್​ ಹುಚ್ಚು ಹಿಡಿಸಿರುವ ಪಬ್‍ಜಿ ಗೇಮ್ ಪ್ರತಿಮೆಯನ್ನು ನಿರ್ಮಿಸಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮಸೂದ್ ಅಜರ್ ಪ್ರತಿಮೆಯ ಕೆಳಗೆ ಭಯೋತ್ಪಾದನೆ ಎಂದು ಬರೆಯಲಾಗಿದ್ದು, ಈ ಮೂಲಕ ಭಯೋತ್ಪಾದನೆ ಮಾಡುವ ಉಗ್ರರನ್ನು ಹತ್ಯೆ ಮಾಡಬೇಕು ಎನ್ನುವ ಸಂದೇಶವನ್ನು ಯುವಕರು ನೀಡಿದ್ದಾರೆ.

      ಪ್ರತಿಕೃತಿಯನ್ನು  ಈಗಾಗಲೇ ನಿರ್ಮಿಸಿದ್ದು, ಇಂದು ಸಂಜೆ ನಡೆಯುವ ಹೋಳಿ ಆಚರಣೆ ನಂತರ ಅದನ್ನು ಸುಟ್ಟುಹಾಕಲಿದ್ದಾರೆ. ಈ ಮೂಲಕ ಹಿರಣ್ಯ ಕಶಿಪು ಸಹೋದರಿ ಹೋಲಿಕಾಳನ್ನು ಸುಟ್ಟು ಆಚರಿಸುವ ಹೋಳಿ ಹಬ್ಬ ಈ ಬಾರಿ ಮುಂಬೈನಲ್ಲಿ ಇನ್ನಷ್ಟು ಕಳೆಗಟ್ಟಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap