‘ಕೊರೊನಾ ವೈರಸ್’​ಗೆ ಭಾರತದಲ್ಲಿ ‘ಮೊದಲ ಬಲಿ’!

ಪಶ್ಚಿಮ ಬಂಗಾಳ: 

      ಶಂಕಿತ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಎನ್ನಲಾದ ಥೈಲ್ಯಾಂಡ್​ ಮೂಲದ 32 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಶಂಕಿತ ‘ಕೊರೊನಾ ವೈರಸ್’​ಗೆ ಭಾರತದಲ್ಲಿ ಮೊದಲ ಬಲಿ ಇದಾಗಿದೆ.

      ಕೊರೊನಾ ವೈರಸ್​ ಹೋಲುವ ಲಕ್ಷಣಗಳಾದ ಹೊಟ್ಟೆ ನೋವು, ವಾಕರಿಕೆ ಹಾಗೂ ಜ್ವರದಿಂದ ಬಳಲುತ್ತಿದ್ದ ಥೈಲ್ಯಾಂಡ್​ ಮೂಲದ 32 ವರ್ಷ ವಯಸ್ಸಿನ ಮಹಿಳೆಯೊಬ್ಬರು ಜನವರಿ 21ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಆಗಿದ್ದರು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

     ಇನ್ನು ಮೃತ ಮಹಿಳೆ ನವೆಂಬರ್​ ತಿಂಗಳಲ್ಲೇ ಥೈಲ್ಯಾಂಡ್​ನಿಂದ ಹೊರಟು ಪ್ರವಾಸ ಕೈಗೊಂಡಿದ್ದು, ಭಾರತಕ್ಕೆ ಬರುವ ಮೊದಲು ನೇಪಾಳಕ್ಕೆ ಭೇಟಿ ನೀಡಿರುವುದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link