ಪಾಟ್ನಾ:
ವಯಸ್ಸಾದ ತಂದೆ ತಾಯಿಯನ್ನು ಆರೈಕೆ ಮಾಡದೆ ತೊರೆಯುವ ಮಕ್ಕಳಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವಕ್ಕೆ ಬಿಹಾರದ ಸರ್ಕಾರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಹೆತ್ತವರನ್ನು ನಿರ್ಲಕ್ಷಿಸುವ, ಅನಾಥರನ್ನಾಗಿಸುವ ಮಗ ಹಾಗೂ ಮಗಳ ವಿರುದ್ಧ ಹೆತ್ತವರು ದೂರು ನೀಡಿದ ಬಳಿಕ ಜಾಮೀನು ರಹಿತ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ರಾಜ್ಯ ಸಮಾಜ ಕಲ್ಯಾಣ ಇಲಾಖೆ ಈ ಪ್ರಸ್ತಾವವನ್ನು ಮುಂದಿಟ್ಟಿತ್ತು.
ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರದ ಸಚಿವ ಸಂಪುಟ ಸಭೆ ಮಂಗಳವಾರ ಅನುಮೋದನೆ ನೀಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಿಹಾರ ಸರಕಾರದ ಈ ನಿರ್ಧಾರವು ಹೆತ್ತವರನ್ನು ನಿರ್ಲಕ್ಷಿಸುವ ಅಥವಾ ಕೈಬಿಡುವ ಸಮಾಜದ ಮೇಲೆ ದೂರದ ಪರಿಣಾಮಬೀರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ