ತಿರುಪತಿಯ ದೇವಸ್ಥಾನದಲ್ಲಿ ವಜ್ರ ಖಚಿತ 3 ಕಿರೀಟ ನಾಪತ್ತೆ..!

ತಿರುಪತಿ:

   ತಿರುಪತಿಯಲ್ಲಿರುವ ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದ ಮೂರು ವಜ್ರಖಚಿತ ಚಿನ್ನದ ಕಿರೀಟಗಳು ನಾಪತ್ತೆಯಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ. ದೇಗುಲದಲ್ಲಿ ವಜ್ರ ಖಚಿತ 3 ಚಿನ್ನದ ಕಿರೀಟಗಳು ನಾಪತ್ತೆಯಾಗಿವೆ

   1 ಕೆ.ಜಿ.300 ಗ್ರಾಂ ತೂಕದ 3 ಕಿರೀಟಗಳು ನಾಪತ್ತೆಯಾಗಿವೆ. ಗೋವಿಂದರಾಜು ದೇಗುಲ ಟಿಟಿಡಿ ಅಧೀನದಲ್ಲಿದೆ. ನಿನ್ನೆ ಸಂಜೆ 5 ಗಂಟೆಗೆ ಪೂಜೆ ಮಾಡಿ ದೇಗುಲದ ಬಾಗಿಲು ಬಂದ್ ಮಾಡಲಾಗಿತ್ತು. 45 ನಿಮಿಷದ ಬಳಿಕ ದೇಗುಲದ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

  ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಮಾಹಿತಿ ರವಾನಿಸಿದ್ದು, ಕೂಡಲೇ ಕಾರ್ಯನಿರ್ವಹಣಾಧಿಕಾರಿ, ಮುಖ್ಯಸ್ಥ ಮತ್ತಿತರರು ದೇವಸ್ಥಾನಕ್ಕೆ ರಾತ್ರಿಯೇ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದಾರೆ.

  ಅಲ್ಲದೇ ಈ ಬಗ್ಗೆ ದೇವಸ್ಥಾನದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೇವಸ್ಥಾನದ ಸಿಬ್ಬಂದಿಯನ್ನು ಕೂಡ ತನಿಖೆ ನಡೆಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link