ನವದೆಹಲಿ:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ದಿನದ ಕಾರ್ಯಕ್ರಮ ಪ್ರಾರಂಭವಾಗಿದ್ದು, ರಾಷ್ಟ್ರಪ್ರತಿ ಭವನದಲ್ಲಿ ಟ್ರಂಪ್ ಅವರ ಗೌರವಾರ್ಥ ಸಮಾರಂಭ ಜರುಗಿತು.
#WATCH LIVE from Delhi: US President Donald Trump receives ceremonial reception at Rashtrapati Bhawan. https://t.co/BhP31tFNU7
— ANI (@ANI) February 25, 2020
ಪ್ರಸಿದ್ಧ ದಿ ಬಿಯಾಸ್ ಕಾರಿನಲ್ಲಿ ಪತ್ನಿ ಮೆಲಾನಿಯಾ ಅವರೊಂದಿಗೆ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಟ್ರಂಪ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಅವರ ಪತ್ನಿ ಸವಿತಾ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಆತ್ಮೀಯ ಸ್ವಾಗತ ನೀಡಿದರು.
ರಾಷ್ಟ್ರಪತಿ ಭವನದ ಮುಂಭಾಗದ ಆವರಣದಲ್ಲಿ ಭೂ, ವಾಯು ಹಾಗೂ ನೌಕ ಸೇನಾ ಸಿಬ್ಬಂದಿಯಿಂದ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಡೊನಾಲ್ಡ್ ಟ್ರಂಪ್ ವಿವಿಧ ಸೇನಾ ತುಕಡಿಗಳ ಪರೇಡ್ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು.
#WATCH Delhi: US President Donald Trump & First Lady Melania Trump pay tribute to Mahatma Gandhi at Raj Ghat. pic.twitter.com/BGrJL4DHLq
— ANI (@ANI) February 25, 2020
ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಆರೋಗ್ಯ ಸಚಿವ ಹರ್ಷವರ್ಧನ್, ಹಾಗೂ ಸೇನಾ ವಿಭಾಗದ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರಪತಿ ಭವನದಲ್ಲಿ ಎರಡೂ ದೇಶಗಳ ರಾಷ್ಟ್ರಗೀತೆ ಹಾಡಲಾಯಿತು. ಮೂರೂ ಸೇನಾಪಡೆಗಳಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಗೌರವ ಸಲ್ಲಿಸಲಾಯಿತು.
ನಂತರ ಟ್ರಂಪ್ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿ ಇರುವ ಸ್ಥಳ ರಾಜ್ ಘಾಟ್ ಗೆ ತೆರಳಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ