ತುಮಕೂರು :
ಮಾಜಿ ಮೇಯರ್ ರವಿಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ನ್ಯಾಯಾಲಯಕ್ಕೆ ಶರಣಾಗತನಾಗಿದ್ದು, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವ ಬಗ್ಗೆ ಮೂಲಗಳು ತಿಳಿಸಿವೆ. ಇದರಿಂದಾಗಿ ಈ ಕೊಲೆ ಪ್ರಕರಣದಲ್ಲಿ ಈತ ಒಂಬತ್ತನೇ ಆರೋಪಿ ಎಂದು ತಿಳಿದುಬಂದಿದೆ.
ಬೆಳ್ಳಂಬೆಳಗ್ಗೆಯೇ ಪಾಲಿಕೆಯ ಮಾಜಿ ಮೇಯರ್ ಬರ್ಬರ ಹತ್ಯೆ
ಒಂದನೇ ಆರೋಪಿ ಸುಜಯ್ ಭಾರ್ಗವ್ ಆಲಿಯಾಸ್ ಸುಜಿ ಇತ್ತೀಚೆಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಶರಣಾಗತನಾಗಿದ್ದ, ಈಗ ಈತನ ಸಹಚರ ಎಂದು ಹೇಳಲಾಗುತ್ತಿರುವ ಶಂಕಿತ ಆರೋಪಿ ತುಮಕೂರಿನ ಸುನಿಲ್ ಎಂಬಾತನನ್ನು ಪೊಲೀಸರು ಹುಡುಕುತ್ತಿದ್ದರು. ಪೊಲೀಸರ ಕೈಗೆ ಸಿಗದೆ ಮಂಗಳವಾರ ಾರೋಪಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಕಾರ್ಪೋರೇಟರ್ ರವಿ ಹಂತಕರ ಸುಳಿವು..?
ಶನಿವಾರ ಕುಂದೂರು ರಾಜಿ ಆಲಿಯಾಸ್ ರಾಜೇಶ್ ಮೇಲೆ ಫೈರಿಂಗ್ ಆದ ಹಿನ್ನೆಲೆಯಲ್ಲಿ ಭೀತಿಯಿಂದ ಸುನಿಲ್ ಶರಣಾಗಿದ್ದಾನೆ. ಸೆ.30 ರಂದು ಬೆಳ್ಳಂಬೆಳಗ್ಗೆ ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಲಿ ಕಾರ್ಪೋರೇಟರ್ ರವಿಕುಮಾರ್ ಅವರನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಅ. 2 ರಂದು ಸುಜಯ್ ಭಾರ್ಗವ್, ರಘು ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಶರಣಾಗಿದ್ದರು. ಮಾಜಿ ಮೇಯರ್ ರವಿಕುಮಾರ್ ಹತ್ಯೆ ಆರೋಪಿ ಶೂಟೌಟ್ !!!
ಸುನಿಲ್ ಸೇರಿದಂತೆ ಇನ್ನೂ ಕೆಲವು ಶಂಕಿತ ಆರೋಪಿಗಳ ಬಗ್ಗೆ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ತುಮಕೂರು ನಗರ ಮಾತ್ರವಲ್ಲದೆ ಜಿಲ್ಲೆಯ ಇತರೆ ಕೆಲವು ಪ್ರದೇಸಗಳಲ್ಲಿ ಪೊಲೀಸರ ತಂಡ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ