ತುಮಕೂರು ವಿಶ್ವವಿದ್ಯಾನಿಲಯದಲ್ಲಿಗ್ರಂಥಾಲಯಜಾಗೃತಿಜಾಥಾ

ತುಮಕೂರು: 

   ರಾಷ್ಟ್ರೀಯಗ್ರಂಥಾಲಯ ಸಪ್ತಾಹ ಜಾಥಾಕ್ಕೆ ವಿವಿ ಕುಲಪತಿ ಪ್ರೊ. ಸಿದ್ದೇಗೌಡ ಹಸಿರು ಬಾವುಟತೋರುವುದರೊಂದಿಗೆಚಾಲನೆ ನೀಡಿದರು

   “ಇಂದಿನ ಓದುಗರು, ನಾಳಿನ ನಾಯಕರು”, “ಬನ್ನಿ ಗ್ರಂಥಾಲಯಕ್ಕೆ, ನಿಮ್ಮದೇ ವಿಶ್ವವಿದ್ಯಾನಿಲಯಕ್ಕೆ”, “ಅರಿವಿನ ದೇವಾಲಯ, ನಮ್ಮಗ್ರಂಥಾಲಯ”, “ಓದಿನಿಂದ ವಿದ್ವತ್ತು, ಗ್ರಂಥಗಳೇ ಸಂಪತ್ತು” ಮೊದಲಾದ ಹತ್ತು ಹಲವು ಘೋಷವಾಕ್ಯಗಳು ತುಮಕೂರು ವಿಶ್ವವಿದ್ಯಾನಿಲಯದಆವರಣದ ಸುತ್ತಮುತ್ತಇಂದು ಅನುರಣಿಸಿದವು.

 

   ದೇಶಾದ್ಯಂತ ಪ್ರತಿವರ್ಷ ನವೆಂಬರ್ 14 ರಿಂದ 20ರವರೆಗೆ ನಡೆಯುವ “ರಾಷ್ಟ್ರೀಯಗ್ರಂಥಾಲಯ ಸಪ್ತಾಹ”ದ ಅಂಗವಾಗಿ ವಿಶ್ವವಿದ್ಯಾನಿಲಯದಗ್ರಂಥಾಲಯ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವುಜಂಟಿಯಾಗಿಇಂದುಆಯೋಜಿಸಿದ್ದ ಗ್ರಂಥಾಲಯ ಮತ್ತು ಓದಿನ ಕುರಿತುಅರಿವು ಮೂಡಿಸುವಜಾಥಾಗೆ ವಿವಿ ಕುಲಪತಿ ಪ್ರೊ.ಸಿದ್ದೇಗೌಡ ಹಸಿರು ಬಾವುಟತೋರಿಸುವುದರೊಂದಿಗೆಚಾಲನೆ ನೀಡಿದರು.ಓದು, ಪುಸ್ತಕ ಮತ್ತು ಗ್ರಂಥಾಲಯಗಳ ಮಹತ್ವದ ಬಗ್ಗೆ ಮಾತನಾಡಿದಅವರುಅಬ್ದುಲ್ ಕಲಾಂ ಅವರ “ಒಂದುಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ” ಎಂಬ ಮಾತನ್ನು ನೆನಪಿಸಿಕೊಂಡರು.

    ಮೌಲ್ಯಗಳನ್ನು ವ್ಯಕ್ತಿಗಳ ಮನಸ್ಸಿನಲ್ಲಿ ಆಳವಾಗಿ ಬಿತ್ತುವುದರಲ್ಲಿ ಪುಸ್ತಕಗಳು ಮತ್ತು ಓದಿನ ಪಾತ್ರ ಬಹಳ ಮಹತ್ತರವಾದದ್ದು.ಇಂದಿನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಯುಗದಲ್ಲಿಓದುವ ಪ್ರವೃತ್ತಿಕ್ರಮೇಣಕ್ಷೀಣಿಸುತ್ತಿದೆ.ಓದುಗರನ್ನುಗ್ರಂಥಾಲಯಕ್ಕೆ ಮರಳಿ ಕರೆತರುವಲ್ಲಿಜಾಥಾದಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ.ಯಾವದೇಶದಲ್ಲಿ ಪ್ರಜೆಗಳು ಮಾಹಿತಿ ಸಾಕ್ಷರರಾಗಿರುತ್ತಾರೋ ಆ ದೇಶದಲ್ಲಿ ಸಮೃದ್ಧಿ ಮತ್ತು ಸೌಹಾರ್ದ ಸದಾ ಮನೆಮಾಡಿರುತ್ತದೆಎಂದರು.ಜಾಥಾದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದುಅವರನ್ನು ಹುರಿದುಂಬಿಸಿದರು.

    ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಪಾಟೀಲ್ ಮಲ್ಲಿಕಾರ್ಜುನ,ಹಣಕಾಸು ಅಧಿಕಾರಿಗಳು, ಪ್ರಾಧ್ಯಾಪಕ ಮತ್ತು ಪ್ರಭಾರ ವಿವಿ    ಗ್ರಂಥಪಾಲಕಡಾ.ಬಿ.ಟಿ. ಸಂಪತ್‍ಕುಮಾರ್, ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥಡಾ. ಕೇಶವ, ವಿವಿ ಉಪಗ್ರಂಥಪಾಲಕರು, ವಿವಿಧ ವಿಭಾಗಗಳ ಬೋಧಕರು, ಕರ್ನಾಟಕಕಾಲೇಜುಗ್ರಂಥಪಾಲಕರ ಸಂಘದಅಧ್ಯಕ್ಷ ಎಂ.ಎನ್.ಎನ್.ಪ್ರಸಾದ್, ವಿವಿ ಕಲಾ ಹಾಗೂ ವಿಜ್ಞಾನ ಕಾಲೇಜುಗಳಗ್ರಂಥಪಾಲಕರು, ನಗರದ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತುಗ್ರಂಥಪಾಲಕರು, ವಿವಿ ಗ್ರಂಥಾಲಯಸಿಬ್ಬಂದಿ ಹಾಗೂ ಸಂಶೋಧನಾರ್ಥಿಗಳು ಹಾಜರಿದ್ದರು.

   ವಿಶ್ವವಿದ್ಯಾನಿಲಯದಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಸಮಾಜಕಾರ್ಯ, ಇಂಗ್ಲಿಷ್ ವಿಭಾಗ, ಕಲಾ ಕಾಲೇಜಿನಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸ್ನಾತಕ ವಿದ್ಯಾರ್ಥಿಗಳು, ನಗರದ ಬಸವೇಶ್ವರಕಾಲೇಜಿನ ವಿದ್ಯಾರ್ಥಿಗಳೂ ಸೇರಿದಂತೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡು ವಿವಿ ಕುಲಪತಿಕಚೇರಿಯಿಂದ ಕುವೆಂಪು ನಗರ, ಮಹಾತ್ಮಾಗಾಂಧಿಕ್ರೀಡಾಂಗಣ, ಶಿವಕುಮಾರ ಸ್ವಾಮೀಜಿ ವೃತ್ತ ಮಾರ್ಗವಾಗಿ ಚಲಿಸಿ, ಘೋಷವಾಕ್ಯಗಳುಳ್ಳ ಭಿತ್ತಿಚಿತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತ ಸಾರ್ವಜನಿಕರ ಗಮನ ಸೆಳೆದರು. ಸಾರ್ವಜನಿಕರಲ್ಲಿಓದುವ ಹವ್ಯಾಸವನ್ನು ಬೆಳೆಸುವ, ಪುಸ್ತಕಗಳು ಮತ್ತು ಗ್ರಂಥಾಲಯಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link