ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮೇಲೆ ದಾಳಿಗೆ ಸೋನಿಯಾ ಗಾಂಧಿ ಕಾರಣ!!?

ಮುಂಬಯಿ: 

      ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ನಡೆದಿದ್ದು, ಈ ದಾಳಿಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನೇರ ಕಾರಣ ಎಂದು ಅರ್ನಬ್‌ ಗೋಸ್ವಾಮಿ ವಿಡಿಯೋ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.

      ಇಂದು ಮುಂಜಾನೆ ಅರ್ನಬ್ ಗೋಸ್ವಾಮಿ ಹಾಗೂ ಪತ್ನಿ ಸಮಿಯಾ ಗೋಸ್ವಾಮಿ ತಮ್ಮ ಸ್ಟುಡಿಯೋದಿಂದ ತೆರಳುತ್ತಿದ್ದ ಕಾರಿನ ಮೇಲೆ ಕಿಡಿಗೇಡಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.

      ಮಧ್ಯರಾತ್ರಿ 12.15ರ ಸುಮಾರಿಗೆ ಗಣಪತ್ರಾವ್ ಕದಮ್ ಮಾರ್ಗ್ ಪ್ರದೇಶದಲ್ಲಿ ತೆರಳುವ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಲು ಕಾರಿನ ಮೇಲೆ ದಾಳಿ ನಡೆಸಿದ್ದರು. ಬೈಕ್ ನಲ್ಲಿದ್ದ ವ್ಯಕ್ತಿಯೊಬ್ಬ ನನ್ನನ್ನು ಬೆಟ್ಟು ಮಾಡಿ ತೋರಿಸಿ ಕಾರಿನ ಮುಂದೆ ಬೈಕ್ ನಿಲ್ಲಿಸಿ ಅಡ್ಡಗಟ್ಟಿದ್ದರು. ಚಾಲಕನ ಸೀಟ್ ಬಳಿಯಿದ್ದ ಕಿಟಿಕಿಗೆ ಸಾಕಷ್ಟು ಬಾರಿ ಹೊಡೆದರು. ಬಳಿಕ ಕಿಟಕಿ ಗಾಜುಗಳನ್ನು ಒಡೆಯಲು ಸಾಧ್ಯವಾಗಲಿಲ್ಲ. ನಂತರ ತಮ್ಮ ಬಳಿಯಿದ್ದ ಬಾಟಲಿ ತೆಗೆದು ಅದರಲ್ಲಿದ್ದ ದ್ರವದ ರೀತಿಯ ವಸ್ತುವನ್ನು ಕಾರಿನ ಮೇಲೆಲ್ಲಾ ಸುರಿದು, ಬಾಯಿಗೆ ಬಂದ ರೀತಿಯಲ್ಲಿ ನಿಂದಿಸುತ್ತಿದ್ದರು ಗೋಸ್ವಾಮಿ ದೂರಿನಲ್ಲಿ ಹೇಳಿಕೊಂಡಿದ್ದಾರೆ.

      ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಇಬ್ಬರ ವಿರುದ್ಧ ಭಾರತೀಯ ಸಂವಿಧಾನದ ಕಾಯ್ದೆ 341 ಮತ್ತು 504 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

      ದಾಳಿಗೆ ನೇರ ಹೊಣೆ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಎಂದು ಅರ್ನಬ್‌ ಗೋಸ್ವಾಮಿ ವಿಡಿಯೋ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ‘ಈ ರಾಷ್ಟ್ರದ ಅತಿದೊಡ್ಡ ಹೇಡಿ’ ಎಂದು ಜರೆದಿರುವ ಗೋಸ್ವಾಮಿ, ತನ್ನ ಮತ್ತು ಪತ್ನಿಯ ಮೇಲಿನ ದಾಳಿಗೆ ಸೋನಿಯಾ ಗಾಂಧಿಯೇ ನೇರ ಕಾರಣ. ತನಗೇನಾದರು ಸಂಭವಿಸಿದರೆ ಅದಕ್ಕೂ ಸೋನಿಯಾ ಗಾಂಧಿ ಅವರೇ ಕಾರಣ ಎಂದು ಆರೋಪಿಸಿ ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap